ಬೀದರ: ಪ್ರವಾಸಿ ವಿಸಾದಡಿ ಮಾರ್ಚ್ ತಿಂಗಳಲ್ಲಿ ಬೀದರ ನಗರಕ್ಕೆ ಧರ್ಮ ಪ್ರಚಾರಕ್ಕೆ ಬಂದಿರುವ ಕಿರ್ಗಿಸ್ತಾನದ 8 ಜನರು ರಟಕಲಪುರದ ಮರ್ಕಜ್ನಲ್ಲಿ ಉಳಿದುಕೊಂಡು ಬಂದ ಹಿನ್ನೆಲೆಯಲ್ಲಿ ಇವರ ವಿರುದ್ಧ ಬೀದರ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಬೀದರ ನಗರದಲ್ಲಿ ಕಳೆದ 1-2 ದಿನಗಳಿಂದ ಮಾನಸಿಕ ಅಸ್ವಸ್ಥನೊಬ್ಬ ಬೀದರ ನಗರದ ಹಲವು ಬಡಾವಣೆಗಳಲ್ಲಿ ರಾತ್ರಿ ಸಮಯದಲ್ಲಿ ಮನೆ ಮನೆಗಳಿಗೆ ಹೋಗಿ ಮನೆಯ ಗೇಟ್ ತೆಗೆದು ಒಳಗೆ ಪ್ರವೇಶ ಮಾಡಿ, ಮತ್ತೇ ಮುಂದಿನ ಮನೆಗೆ ಹೋಗಿ ಅದೇ ರೀತಿ ಮಾಡುವ ಮೂಲಕ ಬೀದರ ನಗರದ ವಿವಿಧ ಬಡಾವಣೆಗಳ ಜನರಲ್ಲಿ ಆತಂಕ ಸೃಷ್ಟಿಸಿ ಮಾಡಿದ ಆತನನ್ನು ಪೊಲೀಸರು ಬಂಧಿಸಿದ್ದು, ಈತ 35 ವರ್ಷದ ಮಾನಸಿಕ ಅಸ್ವಸ್ಥ ಎಂಬದನ್ನು ಪೊಲೀಸರು ತಿಳಿಸಿದ ಬಳಿಕ ಬೀದರ ನಗರದ ಜನರು ನಿರಾಳವಾಗಿ ನಿದ್ದೆ ಮಾಡಿದ್ದಾರೆ.