ದಾವಣಗೆರೆ,ಏ.6-ನಗರದಲ್ಲಿ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಪರಿಣಾಮ ಜನ ತೊಂದರೆ ಅನುಭವಿಸಬೇಕಾಯಿತು.
ತಡರಾತ್ರಿ ದೀಢೀರ್ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ಜಾಗರಣೆ ಮಾಡಬೇಕಾಯಿತು.
ಸುಮಾರು 700ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಮಳೆನೀರನ್ನು ಮನೆಯಿಂದ ಹೊರಹಾಕುವಲ್ಲಿ ಜನತೆ ಹರಸಾಹಸಪಟ್ಟರು.
ಅಲ್ಲದೆ ಗುಡಿಸಲಿನ ವಾಸವಿದ್ದ ಜನರು ತೀವ್ರ ತೊಂದರೆಗೊಳಗಾಗಿದ್ದು, ಬಹಳಷ್ಟು ವಸ್ತುಗಳು ನೀರುಪಾಲಾಗಿದೆ.
ನಗರದ ಪಿಬಿರಸ್ತೆಯಲ್ಲಿದ್ದ ಕಾರ್ಮಿಕರನ್ನು ಸಮೀಪದ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಿ ನೀರು, ಉಪಾಹಾರದ ವ್ಯವಸ್ಥೆ ಮಾಡಿಕೊಡಲಾಗಿದೆ.
ಪಾಲಿಕೆ ಆಯುಕ್ತ ವಿಶ್ವನಾಥ್ ಹಾಗೂ ಮೇಯರ್ ಬಿ.ಜಿ.ಅಜಯ್ಕುಮಾರ್, ಜಿಲ್ಲಾಧಿಕಾರಿ ಮಹಂತೇಶ್ ಬಿಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಮಳೆಯಿಂದಾಗಿ ಹಾನಿಗೊಳಗಾದವರಿಗೆ 5000 ರೂ. ಪರಿಹಾರ ನೀಡುವುದಾಗಿ ತಗ್ಗುಪ್ರದೇಶದ ಜನರಿಗೆ ಜಿಲ್ಲಾಧಿಕಾರಿ ಮಹಂತೇಶ್ ಭರವಸೆ ನೀಡಿದ್ದಾರೆ.