ಬರ್ಗಢ, ಏ.6- ಒಂಟಿ ಸಲಗ ನಡೆಸಿದ ದಾಳಿಯಲ್ಲಿ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಬಲಿಯಾಗಿರುವ ದುರ್ಘಟನೆ ಒಡಿಶಾದ ಬರ್ಗಢ ಜಿಲ್ಲೆಯ ಪದಂಪುರ ಪಟ್ಟಣದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಅರಣ್ಯದ ಅಂಚಿನಲ್ಲಿರುವ ಪದಂಪುರ ಪಟ್ಟಣದ ಗ್ರಾಮವೊಂದರ ಗುಡಿಸಲುಗಳ ಮೇಲೆ ದಾಳಿ ನಡೆಸಿದ ಒಂಟಿಸಲಗ ನಾಲ್ವರನ್ನು ಕಾಲಿನಿಂದ ಹೊಸೆಕಿ ಹಾಕಿದೆ.
ಈ ದಾಳಿಯಲ್ಲಿ 75 ವರ್ಷದ ವೃದ್ಧ, ಬಾಲಕ ಮತ್ತು ಇನ್ನಿಬ್ಬರು ಬಲಿಯಾಗಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಮೇಲೆ ಕಾಡಾನೆಗಳ ದಾಳಿ ಇತ್ತೀಚೆಗೆ ತೀವ್ರವಾಗಿದ್ದು, ಆನೆಯ ಕಾಲ್ತುಳಿತಕ್ಕೆ ಇಬ್ಬರು ಮೃತಪಟ್ಟಿದ್ದರು.