ಮೈಸೂರು: ಕೆ.ಆರ್.ನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪನವಾದ ಅನುಭವವಾಗಿದೆ.
ಕೆ.ಆರ್.ನಗರದ ಭೇರ್ಯ, ಸಾಲಿಗ್ರಾಮ, ಹೊಸೂರು, ಚುಂಚನಕಟ್ಟೆ, ದಿಡ್ಡಹಳ್ಳಿ, ಚಿಕ್ಕಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಂಜೆ 5.10ರ ವೇಳೆಯಲ್ಲಿ ಇದ್ದಕ್ಕಿದಂತೆ ಐದಾರು ಸೆಕೆಂಡ್ಗಳ ಕಾಲ ಭೂಮಿ ಕಂಪನವಾದ ಅನುಭವವಾಗಿದ್ದು, ಮನೆಯಲ್ಲಿ ಪಾತ್ರೆಗಳು ನೆಲಕ್ಕೆ ಬಿದ್ದಿವೆ. ಮನೆಯ ಹೆಂಚುಗಳು ಉದುರಿ ಬಿದ್ದಿವೆ. ಇದರಿಂದ ಗಾಬರಿಗೊಂಡ ಜನರು, ಮನೆಯಿಂದ ಹೊರಗೋಡಿ ರಸ್ತೆಗೆ ಬಂದು ನಿಂತರು. ತಮಗಾದ ಭೂಕಂಪನದ ಅನುಭವವನ್ನು ಪರಸ್ಪರ ಹಂಚಿಕೊಅಡರು.