ಚೀನಾ; ಮಾರಣಾಂತಿಕ ಕೊರೋನಾ ವೈರಸ್ ಹಾವಳಿಯಿಂದ ತತ್ತರಿಸಿ ಕೊನೆಗೂ ಎಚ್ಚೆತ್ತಿರುವ ಚೀನಾ ಸರ್ಕಾರ ಅಲ್ಲಿನ ಮಾಂಸದ ಅಂಗಡಿಗಳಲ್ಲಿ ಬೆಕ್ಕು ಮತ್ತು ನಾಯಿಗಳ ಮಾಂಸ ಮಾರಾಟಕ್ಕೆ ನಿಷೇಧ ಹೇರಿದೆ.
ಕೊರೋನಾ ವೈರಸ್ ಇಂದು ಇಡೀ ವಿಶ್ವಕ್ಕೆ ಮಾರಕವಾಗಿ ಹರಡಿದೆ. ಚೀನಾದ ವುಹಾನ್ ಪ್ರಾತ್ಯಂದ ಮಾಂಸದ ಅಂಗಡಿಯೊಂದರಿಂದ ಹರಡಿದ್ದ ಈ ವೈರಸ್ ಪ್ರಸ್ತುತ 196 ದೇಶಗಳನ್ನು ಕಾಡುತ್ತಿದೆ. 40000 ಜನ ಈ ಸೋಂಕಿಗೆ ಬಲಿಯಾಗಿದ್ದರೆ, ಸುಮಾರು 8ಲಕ್ಷ ಜನ ಇದಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲೂ ಸಾವಿನ ಸಂಖ್ಯೆ 50 ದಾಟಿದೆ.
ಈ ಕೊರೋನಾ ವೈರಸ್ ಹರಡಿದ್ದೆ ಚೀನಾ. ಇಡೀ ವಿಶ್ವದಲ್ಲೇ ವೈಶಿಷ್ಠ್ಯ ಮತ್ತು ವಿಚಿತ್ರ ಆಹಾರ ಪದ್ಧತಿ ಹೊಂದಿರುವ ಚೀನಾದಲ್ಲಿ ಎಲ್ಲಾ ರೀತಿಯ ಪ್ರಾಣಿಗಳ ಮಾಂಸವನ್ನೂ ಸೇವಿಸಲಾಗುತ್ತದೆ. ಹಲ್ಲಿ, ಹಾವು, ಬಾವಲಿ, ಬೆಕ್ಕು, ನಾಯಿ ಹಾಗೂ ಕೆಲವು ಬಗೆಯ ಹುಳು ಹುಪ್ಪಟೆಗಳನ್ನು ಇಲ್ಲಿನ ಜನ ಸೇವಿಸುತ್ತಾರೆ. ಇಲ್ಲಿನ ಮಾಂಸದ ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ಮಾಂಸಗಳೂ ಲಭ್ಯವಾಗುತ್ತದೆ.
ಕೊರೋನಾ ವೈರಸ್ ಸಹ ಹೀಗೆ ಮಾಂಸದ ಅಂಗಡಿಯಿಂದಲೇ ಹರಡಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದ ಶೆನ್ಜೆನ್ ಪ್ರಾಂತ್ಯದಲ್ಲಿ ನಾಯಿ ಮತ್ತು ಬೆಕ್ಕುಗಳ ಮಾಂಸದ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ.