ಹೊಸದಿಲ್ಲಿ: ಸರಕಾರ ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿಮುಂಜಾಗರೂಕತಾ ಕ್ರಮವಾಗಿ ನಗದು ಬಳಕೆಯನ್ನು ದೂರವಿಡಲು ಉತ್ತೇಜನ ನೀಡುವಂತೆ ಬ್ಯಾಂಕ್ಗಳಿಗೆ ತಿಳಿಸಿದೆ. ಯುಪಿಐ, ನೆಫ್ಟ್ , ಮೊಬೈಲ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಬಳಕೆಗೆ ಉತ್ತೇಜಿಸುವಂತೆ ಸೂಚಿಸಿದೆ.
ಹಣಕಾಸು ಇಲಾಖೆಯು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿನಗದು ಮೂಲಕವೂ ಕೊರೊನಾ ವೈರಸ್ ಹರಡುವ ಸಾಧ್ಯತೆ ಇರಬಹುದು ಎಂದಿದೆ. ಬ್ಯಾಂಕ್ಗಳು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಡಿಜಿಟಲ್ ಪೇಮೆಂಟ್ಗಳ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಿದೆ. ಬ್ಯಾಂಕ್ಗಳ ಶಾಖೆಗಳಲ್ಲಿ ಬ್ಯಾನರ್ಗಳ ಮೂಲಕ, ಪೋಸ್ಟರ್ಗಳ ಮೂಲಕ ಪ್ರಚುರಪಡಿಸಲು ತಿಳಿಸಿದೆ.
ಎಲ್ಐಸಿಯಲ್ಲೂಪ್ರೀಮಿಯಂ ಪಾವತಿಗೆ ಆನ್ಲೈನ್ ಪದ್ಧತಿ ಬಳಸಲು ಉತ್ತೇಜಿಸಲಾಗುತ್ತಿದೆ. ಕೆಲ ಶಾಖೆಗಳ ಕೌಂಟರ್ಗಳಲ್ಲಿಮೊದಲ ಬಾರಿಗೆ ಡೆಬಿಟ್ ಕಾರ್ಡ್ಗಳನ್ನು ಸ್ವೀಕರಿಸಲಾಗುತ್ತಿದೆ.
ನೋಟುಗಳಿಂದ ಕೊರೊನಾ ವೈರಸ್ ಹರಡುತ್ತದೆಯೇ?
ಆರೋಗ್ಯ ತಜ್ಞರ ಪ್ರಕಾರ ನೋಟುಗಳ ಮೂಲಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವ ಸಾಧ್ಯತೆಗಳು ಕಡಿಮೆ. ಹೀಗಿದ್ದರೂ, ಕೊರೊನಾ ವೈರಸ್ ಹರಡುವ ಮಾಧ್ಯಮಗಳಲ್ಲಿಇದೂ ಒಂದಾಗುವ ಸಾಧ್ಯತೆ ಇದೆ. ಕೊರೊನಾ ಹರಡುವ ಇತರ ವಿಧಾನಗಳಿಗೆ ಹೋಲಿಸಿದರೆ ನೋಟುಗಳ ಮೂಲಕ ಪ್ರಸರಣದ ಅಪಾಯಕ ಕಡಿಮೆ. ನೋಟುಗಳ ಮೇಲೆ ವೈರಸ್ ಎಷ್ಟು ಹೊತ್ತು ಇರಬಲ್ಲುದು ಎಂಬುದನ್ನು ವೈಜ್ಞಾನಿಕವಾಗಿ ಇದುವರೆಗೆ ಪತ್ತೆ ಹಚ್ಚಿಲ್ಲ.
ಹೀಗಿದ್ದರೂ, ವಿಶ್ವಾದ್ಯಂತ ಸರಕಾರಗಳು ನೋಟುಗಳ ಬಳಕೆಯನ್ನು ತಕ್ಕಮಟ್ಟಿಗೆ ದೂರವಿಡಲು ಯತ್ನಿಸುತ್ತಿವೆ. ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿಇಂಥ ಯತ್ನಗಳು ನಡೆಯುತ್ತಿವೆ. ಅಮೆರಿಕದಲ್ಲಿಫೆಡರಲ್ ರಿಸವ್ರ್ , ಏಷ್ಯಾದಿಂದ ವಾಪಸ್ ಬರುವ ನೋಟುಗಳನ್ನು ಮರು ಚಲಾವಣೆಗೆ ಮುನ್ನ ಪ್ರತ್ಯೇಕಿಸಿ ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.