ಭೋಪಾಲ್ : ಮಧ್ಯಪ್ರದೇಶ ರಾಜ್ಯ ರಾಜಕೀಯ ಕಳೆದ ಕೆಲ ದಿನಗಳಿಂದ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಇದು ಈಗ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಸಂಜೆ ಐದು ಗಂಟೆಯೊಳಗೆ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪಡೆಸುವಂತೆ ಸುಪ್ರೀಂಕೋರ್ಟ್ ಗಡುವು ನಿಗದಿ ಮಾಡಿತ್ತು. ಇದಕ್ಕೂ ಮೊದಲೇ ಕಮಲ್ನಾಥ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಮಲ್ ನಾಥ್, “ನನಗೆ ಮಧ್ಯಪ್ರದೇಶದ ಜನte 5 ವರ್ಷ ಆಡಳಿತ ನಡೆಸಲು ಅವಕಾಶ ನೀಡಿತ್ತು. ಕಳೆದ 15 ತಿಂಗಳಲ್ಲಿ ನಾನೇನು ತಪ್ಪು ಮಾಡಿದ್ದೇನೆ ಎಂದು ನಿಮ್ಮಲ್ಲಿ ಕೇಳಬೇಕಿದೆ. ನನಗೆ ಬಿಜೆಪಿ ನಿರಂತರವಾಗಿ ಕಿರುಕುಳ ನೀಡಿದೆ. ಬಿಜೆಪಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದೆ,” ಎಂದು ಆರೋಪಿಸಿದರು.
ಈಗಾಗಲೇ ಮಧ್ಯಪ್ರದೇಶದಲ್ಲಿ 22 ಶಾಸಕರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತನಾಡಿರುವ ಕಮಲ್ನಾಥ್,”ಶಾಸಕರು ಮಾಡಿದ ವಿಶ್ವಾಸದ್ರೋಹ ನನ್ನ ಮೇಲಲ್ಲ. ಇದು ಮಧ್ಯಪ್ರದೇಶದ ಜನಕ್ಕೆ ಮಾಡಿದ ವಿಶ್ವಾಸ ದ್ರೋಹ. ಕಳೆದ 15 ತಿಂಗಳಲ್ಲಿ 20 20 ರೈತರ ಸಾಲ ಮನ್ನಾ ಮಾಡಿದ್ದೇನೆ,” ಎಂದರು.