ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೆಂಡತಿಗೂ ಕೊರೋನಾ ಸೋಂಕು

ನವದೆಹಲಿ: ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,179 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 4,900ಕ್ಕೆ ಏರಿಕೆಯಾಗಿದೆ. 1,34,000ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ ಅವರ ಹೆಂಡತಿ ಸೋಫಿ ಗ್ರೆಗೋಯರ್ ಅವರಿ​​ಗೂ ಕೊರೋನಾ ವೈರಸ್ತಗುಲಿರುವುದು ದೃಢಪಟ್ಟಿದೆ.

ವೈದ್ಯರ ಸಲಹೆಗಳನ್ನು ಅನುಸರಿಸಿ ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಕೂಡ ತಿಳಿಸಿದೆ.

ಕರ್ನಾಟಕದ ಕಲಬುರ್ಗಿಯಲ್ಲಿ ದೇಶದ ಮೊದಲ ಕೊರೋನಾ ಬಲಿ ದಾಖಲಾಗಿದೆ. ರಾಜ್ಯದಲ್ಲಿ ಮೊದಲು ನಾಲ್ವರಲ್ಲಿ ಕೊರೋನಾ ಪತ್ತೆಯಾಗಿತ್ತು.

ಅಮೆರಿಕದಿಂದ ಬಂದಿದ್ದ ಒಂದೇ ಕುಟುಂಬದ ಮೂವರು ಹಾಗೂ ಮತ್ತೊಬ್ಬ ಟೆಕ್ಕಿಯಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿತ್ತು. ನಂತರ ಗ್ರೀಸ್​ನಿಂದ ಬೆಂಗಳೂರಿಗೆ ಬಂದಿರುವ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದ ನಂತರ ಆ ಸಂಖ್ಯೆ 5ಕ್ಕೆ ಏರಿಕೆಯಾಗಿತ್ತು.

ರಾಜ್ಯದಲ್ಲಿ ಒಟ್ಟು 18 ಕೊರೋನಾ ಶಂಕಿತರನ್ನು ಐಸೋಲೇಟೆಡ್‌ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ 10 ಜನ, ಇತರೆ ಆಸ್ಪತ್ರೆಯಲ್ಲಿ ಇಬ್ಬರನ್ನು, ಹಾಸನದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬ ಕೊರೋನಾ ಶಂಕಿತರನ್ನು ಐಸೋಲೇಟೆಡ್‌ ವಾರ್ಡ್‌ಗಳಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ