ನಿರ್ಭಯಾ ಕೇಸ್ – ಜೀವ ಉಳಿಸಿಕೊಳ್ಳಲು ದೋಷಿಗಳಿಂದ ಮತ್ತೊಂದು ಹೊಸ ಪ್ರಯತ್ನ

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಜೀವ ಉಳಿಸಿಕೊಳ್ಳಲು ಮತ್ತೊಂದು ಹೊಸ ಪ್ರಯತ್ನ ಆರಂಭಿಸಿದ್ದಾರೆ.

ಗಲ್ಲು ಶಿಕ್ಷೆಗೆ 10 ದಿನಗಳು ಬಾಕಿ ಇರುವಾಗ ದೋಷಿ ವಿನಯ್ ಶರ್ಮಾ ಕ್ಷಮಾದಾನ ಕೋರಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಅರ್ಜಿ ಸಲ್ಲಿಸಿದ್ದಾನೆ.

ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿರಸ್ಕರಿಸಿದ ಬೆನ್ನಲ್ಲೇ ತಿಹಾರ್ ಜೈಲು ಆಡಳಿತ ಹಾಗೂ ದೆಹಲಿ ಸರ್ಕಾರ ಪಟಿಯಾಲ ಕೋರ್ಟ್ ಮೊರೆ ಹೋಗಿತ್ತು.

ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಜಾ ಆಗಿದ್ದು, ನಾಲ್ವರು ದೋಷಿಗಳ ಬಹುತೇಕ ಕಾನೂನು ಹೋರಾಟ ಅಂತ್ಯವಾಗಿದೆ. ಹಾಗಾಗಿ ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಮಾರ್ಚ್ 3ರಂದು ಪಟಿಯಾಲಾ ಕೋರ್ಟ್ ಮೂರನೇ ಬಾರಿ ಡೆತ್ ವಾರೆಂಟ್ ಜಾರಿ ಮಾಡಿತ್ತು. ಆದರೆ ಕಡೆ ಗಳಿಗೆಯಲ್ಲಿ ದೋಷಿ ಪವನ್ ಗುಪ್ತಾ ರಾಷ್ಟ್ರಪತಿಗೆ ತಿರಸ್ಕೃತಗೊಂಡ ಕ್ಷಮದಾನ ಅರ್ಜಿ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದನು. ದಿಢೀರ್ ಬೆಳವಣಿಗೆಯಿಂದ ಮಾರ್ಚ್ 3ರಂದು ನಡೆಬೇಕಿದ್ದ ಗಲ್ಲು ಶಿಕ್ಷೆಗೆ ಪಟಿಯಾಲ ಕೋರ್ಟ್ ತಡೆ ನೀಡಿತ್ತು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ