ನವದೆಹಲಿ; ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ 2009-14ರ ಅವಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದ ದೇಶದ ಹಿರಿಯ ರಾಜಕಾರಣಿ, ಕಾಂಗ್ರೆಸ್ ಧುರೀಣ ಹಂಸರಾಜ್ ಭಾರದ್ವಾಜ್ ಇಂದು ಮೃತಪಟ್ಟಿದ್ದಾರೆ.
ಬಹುದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ದೆಹಲಿಯ ನಿಗಮ್ ಬೋದ್ ಘಾಟ್ನಲ್ಲಿ ನಾಳೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಭಾರದ್ವಾಜ್ ಅವರ ಕುಟುಂಬ ವರ್ಗ ತಿಳಿಸಿದೆ.