ಸಿದ್ದರಾಮಯ್ಯ ವಿರುದ್ಧ ದಾಖಲೆ ಸಹಿತ ಹೈಕಮಾಂಡ್‍ಗೆ ದೂರು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಯಡಿಯೂರಪ್ಪ ಸ್ನೇಹಕ್ಕೆ ಕೈ ನಾಯಕರು ಡೈನಾಮೆಟ್ ಇಟ್ಟಿದ್ದಾರೆ. ಫೆಬ್ರವರಿ 27ರಂದು ಅರಮನೆ ಮೈದಾನದಲ್ಲಿ ನಡೆದ ಸಿಎಂ ಯಡಿಯೂರಪ್ಪನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದು ದಾಖಲೆ ಸಹಿತ ಕೈ ನಾಯಕರು ಹೈಕಮಾಂಡ್ ಗೆ ದೂರು ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ.

ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಡಿಯೋ, ಪೇಪರ್ ಕಟಿಂಗ್ ಎಲ್ಲವು ದೆಹಲಿಗೆ ತಲುಪಿದೆ. ಸಮ್ಮಿಶ್ರ ಸರ್ಕಾರ ಕೆಡವಲು ಯಡಿಯೂರಪ್ಪ ಜೊತೆ ಸಿದ್ದರಾಮಯ್ಯ ಕೈ ಜೋಡಿಸಿದ್ದರು ಅನ್ನೋ ಆರೋಪ ಹಾಗೂ ವಿಪಕ್ಷ ನಾಯಕನಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತದ ಆರೋಪ ಸಿದ್ದರಾಮಯ್ಯರ ಮೇಲಿದೆ.

ಈಗ ಸಿದ್ದರಾಮಯ್ಯರ ವಿರೋಧಿ ಬಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಾಖಲೆ ನೀಡಿದೆ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪರ ಸ್ನೇಹಕ್ಕೆ ದಾಖಲೆಯನ್ನ ಹೈಕಮಾಂಡ್ ಗೆ ತಲುಪಿಸಿದ್ದಾರೆ. ಹೀಗೆ ವಿಪಕ್ಷ ಹಾಗೂ ಸಿಎಲ್‍ಪಿ ಎರಡು ಸ್ಥಾನವನ್ನ ಮರಳಿ ಪಡೆಯುವ ತವಕದಲ್ಲಿದ್ದ ಸಿದ್ದರಾಮಯ್ಯಗೆ ಕೊನೆ ಗಳಿಗೆಯಲ್ಲಿ ಮತ್ತೊಂದು ತೊಡಕು ಎದುರಾದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ