ಜಿಟಿ ದೇವೇಗೌಡ ನಡುವಳಿಕೆ ಅಶಿಸ್ತಿನ ಪರಮಾವಧಿ; ಕಿಡಿಕಾರಿದ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ

ಹಾಸನಜೆಡಿಎಸ್​​ ಪರ ಜಿ.ಟಿ.ದೇವೇಗೌಡ ದ್ವಂದ್ವ ನಿಲುವು ತಳೆದಿದ್ದುಇಲ್ಲೂ ಇದ್ದು, ಅಲ್ಲೂ ಇರುವ ಕೆಲಸ ಮಾಡುತ್ತಿದ್ದಾರೆ. ಇದು ಅಶಿಸ್ತಿನ ಪರಮಾವಧಿ ಎಂದು ಜೆಡಿಎಸ್ರಾಜ್ಯಾಧ್ಯಕ್ಷ ಎಚ್​.ಕೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ

ನಗರದಲ್ಲಿ ಮಾತನಾಡಿದ ಅವರು, ಜಿಟಿ ದೇವೇಗೌಡ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿವೆ. ಒಂದು ಪಕ್ಷದಲ್ಲಿದ್ದಾಗ ಒಂದೇ ಕಡೆ ದೇಹ, ಮನಸ್ಸು ಇರಬೇಕು. ಈ ಮೊದಲು ಅವರು ಬಿಜೆಪಿ ಮೇಲೆ ಮನಸ್ಸು ಇದ್ದು, ದೇಹ ಜೆಡಿಎಸ್​ನಲ್ಲಿತ್ತು.ಈಗ ದೇಹ, ಮನಸ್ಸು ಎರಡೂ ಬಿಜೆಪಿ ಜೊತೆ ಇದೆ.
ಪರಿಷತ್​ ಚುನಾವಣೆಯಲ್ಲಿ ಗುಪ್ತ ಮತದಾನ ಇತ್ತು. ನಮ್ಮ ಪಕ್ಷದಿಂದ ಯಾರು ಮತ ಚಲಾಯಿಸಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ ವಿಪ್ ನೀಡಿರಲಿಲ್ಲ. ಇದನ್ನು ಮೀರಿ ಅವರು ಮತಚಲಾಯಿಸಿದರು.  ಮುಂದೆ ರಾಜ್ಯಸಭಾ ಚುನಾವಣೆ ಇದ್ದು, ಇದೇ ರೀತಿ ವರ್ತಿಸಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು

ಬಿಜೆಪಿ ಪರ ನೀಡುತ್ತಿರುವ ಹೇಳಿಕೆ ನಡವಳಿಕೆಗಳು ಅವರು ಯಾರ ಪರ ಇದ್ದಾರೆ ಎಂಬುದನ್ನು ತಿಳಿಸುತ್ತಿದೆ. ಇದೇ ರೀತಿ ಮುಂದುವರೆದರೆ  ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅವರಿಗೆ ನೋಟೀಸ್ ನೀಡಲು ಚಿಂತನೆ ನಡೆಸಲಾಗುವುದು. ಪಕ್ಷಕ್ಕೆ ನಿಷ್ಠೆ ಯಿಂದ ಇರೋದಾದರೆ ಇರಿ ಎಂದು ವಾರ್ನಿಂಗ್​ ನೀಡಿದರು.
ಸ್ವಂತ ಶಕ್ತಿಯಿಂದ ಗೆದ್ದಿರುವ ಭಾವನೆ ಇರಬಹುದು. ಇಲ್ಲ ಮುಂದಿನ ಭವಿಷ್ಯ ದೃಷ್ಟಿಯಿಂದ ಬಿಜೆಪಿ ಪರ ಇರಲು ಈ ರೀತಿ ಮಾಡಿರಬಹುದು. ಯಾವುದೇ ಸಮಸ್ಯೆ ಆದರೆ, ಈ ಕುರಿತು ನಮ್ಮ ನಾಯಕರ ಜೊತೆ ಮಾತಾಡಿ ಬಗೆಹರಿಸಿ ಕೊಳ್ಳಲಿ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಸಂಖ್ಯೆ ಮುಖ್ಯವಿಲ್ಲ. ಬಿಜೆಪಿಗೆ ಮಾತ್ರ ಸಂಖ್ಯೆ ಮುಖ್ಯವಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ