ಬೆಂಗಳೂರು 24 ಫೆಬ್ರವರಿ 2020 : ಡೈನಾಮಿಕ್ ಮತ್ತು ಪ್ರಗತಿದಾಯಕ ಮಹಾನಗರವಾದ ಬೆಂಗಳೂರಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಏಸ್ ಬ್ಯುಸಿನೆಸ್ ಅವಾರ್ಡ್ಸ್-2020 ಫೆಬ್ರವರಿ 28 ರಂದು ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಪ್ರಸಿದ್ಧ ತಾರೆಯರಾದ ಕರಿಷ್ಮಾ ಕಪೂರ್ ಮತ್ತು ಶಮಿತಾ ಶೆಟ್ಟಿ ಹಾಗೂ ಅಂಕಿತ್ ತಿವಾರಿ, ಇರ್ಫಾನ್ ಪಠಾಣ್, ಶ್ರೀಶಾಂತ್ ಜೊತೆಗೆ ಸಾಧನೆ ಮಾಡಿದ ಉದ್ಯಮಿಗಳು ಮತ್ತು ನವೋದ್ಯಮಿಗಳು ಪ್ರತಿಷ್ಠಿತ ಏಸ್ ಬ್ಯುಸಿನೆಸ್ ಅವಾರ್ಡ್ಸ್ ಪ್ರದಾನ ವೇದಿಕೆಯ ಭವ್ಯ ಸಮಾರಂಭದಲ್ಲಿ ಸಾಕ್ಷಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ತೆರೆದಿದೆ ರಾಷ್ಟ್ರೀಯ ವೇದಿಕೆ;
ಏಸ್ ಬ್ಯುಸಿನೆಸ್ ಅವಾರ್ಡ್ಸ್ ವಿಭಿನ್ನ ಹಾದಿಯನ್ನು ಹಿಡಿಯಲು ಧೈರ್ಯಶಾಲಿ ಮತ್ತು ಅತ್ಯುತ್ತಮ ವ್ಯಾಪಾರ ಸಾಧನೆಯನ್ನು ಪ್ರದರ್ಶಿಸಿದ ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತಿದೆ. ಪ್ರತಿಭೆ ಮತ್ತು ಆವಿಷ್ಕಾರಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ಮತ್ತು ನಮ್ಮ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ನಾವು ಅವರಿಗೆ ಅವಕಾಶವನ್ನು ಒದಗಿಸುತ್ತೇವೆ” ಎಂದು ಎಫ್ಎಕ್ಯೂ ಇವೆಂಟ್ಸ್ ಮತ್ತು ಮೀಡಿಯಾ ಸಂಸ್ಥಾಪಕ ರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಏಸ್ ಬ್ಯುಸಿನೆಸ್ ಮ್ಯಾಗಜೈನ್ನ ರಾಜ್ ಮತ್ತು ಶೆಲ್ಲಿ ಲಾಥರ್ ಮಾಧ್ಯಮಗಳೊಂದಿಗೆ ಸಂವಹನ ನಡೆಸಿ ಉದಯೋನ್ಮುಖ ಪ್ರತಿಭೆಗಳಿಗೆ, ಪ್ರಾದೇಶಿಕ ಭಾಷಾ ಚಿತ್ರ ನಿರ್ಮಾಣಕಾರರಿಗೆ, ಸಮಾಜಮುಖಿ ಮತ್ತು ಜನಪರ ಕಾಳಜಿಯುಳ್ಳ ಸಂಸ್ಥೆಗಳಿಗೆ, ಹೊಸ ಅನ್ವೇಷಕರಿಗೆ ಪ್ರಶಸ್ತಿ ನೀಡುವ ಮತ್ತು ರಾಷ್ಟ್ರೀಯ ವೇದಿಕೆಯಲ್ಲಿ ಅವಕಾಶ ಒದಗಿಸುವ ಉದ್ದೇಶವಿದೆ ಎಂದು ಹೇಳಿದರು.
ಸಾಧನೆ, ನವೀನ ಪ್ರದರ್ಶನದ ಭವ್ಯ ಸಮಾರಂಭವನ್ನು ಅನಾವರಣಗೊಳಿಸಲು ಲೆಕ್ಸಸ್ ಇಂಡಿಯಾ, ಹೇರ್ ಸ್ಕಿಲ್ ಫ್ಯಾಕ್ಟರಿ ಪ್ರಾಯೋಜಕತ್ವವನ್ನು ನೀಡಿದೆ. ಈ ಪ್ರಾಯೋಜಕರು ಆರೋಗ್ಯ, ವ್ಯಾಪಾರ, ಆಹಾರ ಮತ್ತು ಪಾನೀಯಗಳು, ತಂತ್ರಜ್ಞಾನ, ರಿಯಲ್ ಎಸ್ಟೇಟ್, ಶಿಕ್ಷಣ, ಪ್ರಯಾಣ ಮತ್ತು ಮುಂತಾದ ನೂರಕ್ಕೂ ಹೆಚ್ಚು ಕೈಗಾರಿಕೆಗಳು ತಮ್ಮ ಸಾಧನೆಗಳು ಮತ್ತು ನವೀನ ಆಲೋಚನೆಗಳನ್ನು ಪ್ರದರ್ಶಿಸಲಿವೆ ಎಂದು ನಿರೀಕ್ಷಿಸಿದ್ದಾರೆ. ನಟಿ ಕರಿಷ್ಮಾ ಕಪೂರ್, ಶಮಿತಾ ಶೆಟ್ಟಿ ಮತ್ತು ಭಾರತದ ಕೆಲವು ಮಾಜಿ ಕ್ರಿಕೆಟಿಗರು ಈ ಸಂದರ್ಭದಲ್ಲಿ ಸಾಧನೆ ಮಾಡಿದ ನವೋದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವರು.
ಇದು ಮಾತ್ರವಲ್ಲದೆ ಈ ಮಹಾ ವೇದಿಕೆಯಲ್ಲಿ ಫ್ಯಾಷನಿಸ್ಟರಿಗೂ ಪ್ರೀಮಿಯಂ ಲೇಬಲ್ ‘ರಿಯಾ ಮತ್ತು ಶೆಲ್ಲಿ’ ಕೌಚರ್ ಅನ್ನು ಅನಾವರಣಗೊಳಿಸಲಾಗುವುದು. ಪ್ರಖ್ಯಾತ ರೂಪದರ್ಶಿಗಳು ಮತ್ತು ಶೋ ಸ್ಟಾಪರ್ಗಳು ರ್ಯಾಂಪ್ ವಾಕ್ ಮೂಲಕ ಜಗಮಗಿಸುವಂತೆ ತಮ್ಮ ಹೆಜ್ಜೆ ಗೆಜ್ಜೆಗಳನ್ನು ಕಲಾತ್ಮಕವಾಗಿ ಲಾವಣ್ಯಗೊಳಿಸಲಿದ್ದಾರೆ.