ಬೆಂಗಳೂರು: ಸಾವು ನಮ್ಮನ್ನು ಬೇರ್ಪಡಿಸುವವರೆಗೂ ನಾವಿಬ್ಬರೂ ಕೈಯನ್ನು ಹೀಗೆ ಹಿಡಿದಿರಬೇಕು ಎಂಬುದು ನನ್ನ ಇಚ್ಛೆ. ನನ್ನ ಮುಂದಿನ ಜನ್ಮ ಎಂಬುದು ಇದ್ದರೆ, ಆ ಜನ್ಮದಲ್ಲೂ ನೀವೇ ನನ್ನ ಬಾಳ ಸಂಗಾತಿ ಆಗಬೇಕು ಎಂದು ರೇವತಿ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಟ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥವಾದ ಬಳಿಕ ತನ್ನ ಭಾವಿ ಪತ್ನಿಯ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆಷ್ಟೆ ಪ್ರೇಮಿಗಳ ದಿನಾಚರಣೆಯಂದು ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ರೇವತಿ ಮೇಲಿರುವ ಭಾವನೆಯನ್ನು ಹೇಳಿಕೊಂಡಿದ್ದಾರೆ.
“ನನ್ನ ರಾಜಕುಮಾರಿ, ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಸಮಯ ಕಳೆದಂತೆ ಸೌಂದರ್ಯ ಮಾಸಬಹುದು. ಆದರೆ ಒಳ್ಳೆಯ ಗುಣ ಸದಾ ನಮ್ಮ ಜೊತೆಯಲ್ಲಿಯೇ ಉಳಿಯುತ್ತದೆ. ನಾನು ನಿಮ್ಮ ವ್ಯಕ್ತಿತ್ವವನ್ನು ಪ್ರೀತಿಸುತ್ತೇನೆ. ನಿಮ್ಮೊಂದಿಗೆ ನಾನು ಕಳೆಯುತ್ತಿರುವ ಪ್ರತಿ ಕ್ಷಣವೂ ಅಮೂಲ್ಯವಾದುದ್ದು. ನಾನು ಪ್ರತಿ ಸೆಕೆಂಡ್ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಭಾವಿ ಪತ್ನಿ ಬಗ್ಗೆ ನಿಖಿಲ್ ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
“ನಿಮ್ಮ ಜೊತೆ ಕೊನೆಯವರೆಗೂ ಇದೇ ರೀತಿ ಇರಲು ಇಷ್ಟಪಡುತ್ತೇನೆ. ಸಾವು ನಮ್ಮನ್ನು ಬೇರ್ಪಡಿಸುವವರೆಗೂ ನಾವಿಬ್ಬರೂ ಕೈಯನ್ನು ಹೀಗೆ ಹಿಡಿದಿರಬೇಕು ಎಂಬುದು ನನ್ನ ಇಚ್ಛೆ. ನನ್ನ ಮುಂದಿನ ಜನ್ಮ ಎಂಬುದು ಇದ್ದರೆ, ಆ ಜನ್ಮದಲ್ಲೂ ನೀವೇ ನನ್ನ ಬಾಳ ಸಂಗಾತಿ ಆಗಬೇಕು” ಎಂದು ರೇವತಿ ಬಗ್ಗೆ ರೊಮ್ಯಾಂಟಿಕ್ ಮೂಡಿನಲ್ಲಿ ನಿಖಿಲ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ ರೇವತಿ ಕೈಬರಹದಲ್ಲಿ ಬರೆದಿರುವ ಪತ್ರವನ್ನು ನಿಖಿಲ್ ಮತ್ತು ರೇವತಿ ಕೈ-ಕೈ ಹಿಡಿದುಕೊಂಡು ಓದುತ್ತಿರುವ ಫೋಟೋವನ್ನೂ ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೆಬ್ರವರಿ 10ರಂದು ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇವರ ವಿವಾಹ ಕಾರ್ಯಕ್ರಮ ಏಪ್ರಿಲ್ 17 ರಾಮನಗರ-ಚನ್ನಪಟ್ಟಣ ನಡುವಿನ ಜನಪದ ಲೋಕದ ಬಳಿ ನಡೆಯಲಿದೆ. ಅದ್ಧೂರಿ ಸೆಟ್‍ನಲ್ಲಿ ಶಾಸ್ತ್ರೋಕ್ತ ಮತ್ತು ವಾಸ್ತು ಪ್ರಕಾರವಾಗಿ ಇವರ ಮದುವೆ ನಡೆಯಲಿದೆ.