ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಸಿಎಂ ಪಟ್ಟಿ ಸಿದ್ದಪಡಿಸಿದ್ದು, ಅವರ ಬೇಡಿಕೆಯಂತೆಯೇ ಮುಖ್ಯಮಂತ್ರಿಗಳು ಅವರಿಗೆ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಬೇಡಿಕೆಯಂತೆಯೇ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ, ಜಲಸಂಪನ್ಮೂಲ ಖಾತೆ ನೀಡಿದ್ದು, ಶಿವರಾಮ್ ಹೆಬ್ಬಾರ್ಗೆ ಪೌರಾಡಳಿತ, ಬಿ.ಸಿ.ಪಾಟೀಲ್ – ಇಂಧನ, ನಾರಾಯಣಗೌಡ- ಆಹಾರ ಮತ್ತು ನಾಗರಿಕ ಸರಬರಾಜು, ಶ್ರೀಮಂತ ಪಾಟೀಲ್- ಸಕ್ಕರೆ ಹಾಗೂ ಕೆ.ಸುಧಾಕರ್- ವೈದ್ಯಕೀಯ ಖಾತೆ ಹಂಚಿಕೆ ಮಾಡಿದ್ದಾರೆ.
ಚುನಾವಣೆಯಲ್ಲಿ ಗೆದ್ದಗಿನಿಂದಲೂ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದರು. ತಮಗೆ ಡಿಸಿಎಂ ಸ್ಥಾನ ನೀಡದಿದ್ದರೂ ತಮಗೆ ಜಲಸಂಪನ್ಮೂಲ ಖಾತೆಯೇ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು. ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲು ಒಲವು ತೋರಿದ್ದರು. ಆದರೆ, ಇದಕ್ಕೆ ಕೆಲ ಮೂಲ ಬಿಜೆಪಿ ನಾಯಕರು ಅಸಮಾಧಾನ ತೋರಿದ್ದರು.
ಇದರ ಜೊತೆಗೆ ನೂತನ ಸಚಿವ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದೆ. ಈ ಮೂಲಕ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗೋಕಾಕ್ ಶಾಸಕರ ಶಕ್ತಿಯನ್ನು ಸಿಎಂ ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ನೂತನ ಸಚಿವರಿಗೆ ಹಂಚಿಕೆಯಾದ ಖಾತೆ ಪಟ್ಟಿ
ರಮೇಶ್ ಜಾರಕಿಹೊಳಿ – ನೀರಾವರಿಬಿ.ಸಿ.ಪಾಟೀಲ್ – ಇಂಧನ ಖಾತೆ
ಡಾ.ಸುಧಾಕರ್ – ವೈದ್ಯಕೀಯ ಶಿಕ್ಷಣ
ನಾರಾಯಣಗೌಡ – ಆಹಾರ & ನಾಗರಿಕ
ಶಿವರಾಂ ಹೆಬ್ಬಾರ್ – ಪೌರಾಡಳಿತ
ಎಸ್.ಟಿ. ಸೋಮಶೇಖರ್ – ಸಹಕಾರ
ಭೈರತಿ ಬಸವರಾಜು – ನಗರಾಭಿವೃದ್ಧಿ
ಗೋಪಾಲಯ್ಯ – ಕಾರ್ಮಿಕ ಖಾತೆ
ಶ್ರೀಮಂತ ಪಾಟೀಲ್ – ಸಕ್ಕರೆ
ಆನಂದ್ ಸಿಂಗ್ – ಗಣಿ ಮತ್ತು ಭೂ ವಿಜ್ಞಾನ
ಯುವಜನ ಸೇವೆ ಮತ್ತು ಕ್ರೀಡೆ