ಶೈನ್ ಜೇಬಿಗೆ 50 ಅಲ್ಲ 61 ಲಕ್ಷ ಜೊತೆಗೆ ನ್ಯೂ ಕಾರ್

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಗೂ ಮುಕ್ತಾಯವಾಗಿದ್ದು, ನಟ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ‘ಬಿಗ್‍ಬಾಸ್ ಸೀಸನ್ 7’ ರ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದ್ದಾರೆ. 113 ದಿನಗಳನ್ನು ಕಳೆದಿರುವ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನಿಗದಿಪಡಿಸಿದ್ದ 50 ಲಕ್ಷ ರೂ. ಬಹುಮಾನ ಸಿಕ್ಕಿದೆ. ಜೊತೆಗೆ ಅಧಿಕವಾಗಿ 11 ಲಕ್ಷ ಸಿಕ್ಕಿದೆ. ಹೀಗಾಗಿ ಒಟ್ಟಾಗಿ ಶೈನ್ ಶೆಟ್ಟಿ ಜೇಬಿಗೆ 61 ಲಕ್ಷ ರೂ. ಸೇರಿದೆ.

 

ಬಿಗ್‍ಬಾಸ್ ವಿನ್ನರ್‌ಗೆ ನಿಗದಿ ಪಡಿಸಿದ್ದ 51 ಲಕ್ಷ, ಇಂಡಸ್ಟ್ರಿ 555 ಡಿ. ಟಿಎಂಟಿ ಕಂಪನಿಯಿಂದ ವಿನ್ನರ್‌ಗೆ ಒಂದು ಲಕ್ಷ ರೂ. ಇನ್ನೂ 7 ಅಪ್ ಕಡೆಯಿಂದ 10 ಲಕ್ಷ ರೂ. ಬಹುಮಾನ ಸಿಕ್ಕಿದೆ. ಹೀಗಾಗಿ ಒಟ್ಟಾಗಿ 61 ಲಕ್ಷ ರೂ ಸಿಕ್ಕಿದೆ. ಅಷ್ಟೇ ಅಲ್ಲದೇ 61 ಲಕ್ಷ ಹಣದ ಜೊತೆಗೆ ‘ಬಾಸ್‍ಬಾಸ್ ಸೀಸನ್ 7’ ವಿನ್ನರ್ ಪಟ್ಟ ದೊರೆತಿದೆ. ಇದಲ್ಲದೇ ಹೊಸ ಮಾಡೆಲ್ ಟಾಟಾ ಆಲ್ಟ್ರೋಜ್ ಕಾರನ್ನು ವಿನ್ನರ್ ಆದ ಶೈನ್ ಶೆಟ್ಟಿಗೆ ದೊರೆತಿದೆ.

ಕುರಿ ಪ್ರತಾಪ್ ಅವರು ತಮ್ಮ ಕಾಮಿಡಿ ಮೂಲಕ ಬಿಗ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಈ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡಿದ್ದಾರೆ. ಇತ್ತ ಶೈನ್ ಶೆಟ್ಟಿ ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಬಿಗ್ ಪೈಟ್ ನಡೆದಿತ್ತು. ಕೊನೆಗೆ ಆಲ್‍ರೌಂಡರ್ ಶೈನ್ ಶೆಟ್ಟಿ ‘ಬಿಗ್‍ಬಾಸ್ ಕನ್ನಡ 7’ ರ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರಹೊಮ್ಮಿದ್ದಾರೆ.

‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಅಂತಿಮ ವಾರದಲ್ಲಿ ಭೂಮಿ, ಶೈನ್, ವಾಸುಕಿ, ದೀಪಿಕಾ, ಕುರಿ ಪ್ರತಾಪ್ ಐದು ಸ್ಪರ್ಧಿಗಳು ಉಳಿದುಕೊಂಡಿದ್ದರು. ಕೊನೆಗೆ ಭೂಮಿ ಮತ್ತು ದೀಪಿಕಾ ಎಲಿಮಿನೆಟ್ ಆಗುವ ಮೂಲಕ ಫಿನಾಲೆಗೆ ಮೂವರು ಸ್ಪರ್ಧಿಗಳು ತಲುಪಿದ್ದರು. ಶೈನ್, ವಾಸುಕಿ ಮತ್ತು ಕುರಿ ಪ್ರತಾಪ್ ಮಧ್ಯೆ ಭರ್ಜರಿ ಸ್ಪರ್ಧೆ ನಡೆದಿತ್ತು. ಟಾಪ್ 2ರಲ್ಲಿ ವಾಸುಕಿ ವೈಭವ್ ಇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಭೂಮಿ, ದೀಪಿಕಾ ದಾಸ್ ಬಳಿಕ ಭಾನುವಾರದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ಮನೆಯಿಂದ ವಾಸುಕಿ ಹೊರ ಬಂದರು. ಹೀಗಾಗಿ ವಾಸುಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ