ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ

ನವದೆಹಲಿ: ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2ರ ಮೊದಲ ಬಜೆಟ್ ಮಂಡನೆಯಾಗುತ್ತಿದೆ.  ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ.

ಬಜೆಟ್ ಪ್ರಮುಖ ಅಂಶಗಳು

ಶಿಕ್ಷಣ:  2030ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಉದ್ಯೋಗಿಗಳು ಇರುವ ದೇಶವಾಗಿ ಭಾರತ ಹೊರ ಹೊಮ್ಮಲಿದೆ. 150 ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆ. ಶಿಕ್ಷಣದಲ್ಲಿ ವಿದೇಶಿ ಹೂಡಿಕೆ. ಸದ್ಯದಲ್ಲೇ ಹೊಸ ಶಿಕ್ಷಣ ನೀತಿಗೆ ಜಾರಿಗೆ ಕ್ರಮ. 1 ವರ್ಷ ನಗರ- ಸ್ಥಳಿಯ ಸಂಸ್ಥೆಗಳಲ್ಲಿ ತರಬೇತಿ. ರಾಷ್ಟ್ರೀಯು ಪೊಲೀಸ್ ವಿವಿ ಸ್ಥಾಪನೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೂಲಕ ಆನ್ ಲೈನ್ ಶಿಕ್ಷಣ. ಎಲ್ಲ ಜಿಲ್ಲೆಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆ.

ಕಿಸಾನ್ ರೈಲು ಘೋಷಣೆ: 2020ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ನಾವು ಬದ್ಧರಾಗಿದ್ದೇವೆ. ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ.

ಫಿಟ್ ಇಂಡಿಯಾ: 12 ರೋಗಗಳಿಗೆ ಇಂದ್ರಧನುಷ್ ವಿಸ್ತರಣೆ, ಆಯುಷ್ಮಾನ್ ಭಾರತ್ ವಿಸ್ತರಣೆ. ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣ. ಎಲ್ಲ ಜಿಲ್ಲೆಗಳಲ್ಲಿ ಜನೌಷಧಿ ಕೇಂದ್ರ ವಿಸ್ತರಣೆ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ಮೀಸಲು

ನರೇಗಾ ವಿಸ್ತರಣೆ: ಹೈನುಗಾರಿಕೆಗೂ ನರೇಗಾ ವಿಸ್ತರಣೆ ಮಾಡಲಾಗುವುದು. ಮೀನುಗಾರಿಕೆಗಾಗಿ ಸಾಗರ ಮಿತ್ರ ಯೋಜನೆ ಜಾರಿ. ಕೃಷಿ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ಮೀಸಲು

ಸಾಲ ಇಳಿಕೆ: ಕೇಂದ್ರ ಸರ್ಕಾರದ ಸಾಲ ಕಡಿಮೆಯಾಗಿದೆ. 2004ರ ಮಾರ್ಚ್ ನಲ್ಲಿ ಶೇ52.2 ರಷ್ಟು ಇದ್ದರೆ 2019ರ ಮಾರ್ಚ್ ವೇಳೆಗೆ ಇದು ಶೇ.48.7ಕ್ಕೆ ಇಳಿಕೆಯಾಗಿದೆ.

ಜಾಗತಿಕ ಮನ್ನಣೆ: ಈ ಹಣಕಾಸು ವರ್ಷದಲ್ಲಿ 40 ಕೋಟಿ ಜಿಎಸ್ ಟಿ ರಿಟರ್ನ್ಸ್ ಫೈಲ್ ಆಗಿದೆ. ಮೋದಿ ಅವಧಿಯಲ್ಲಿ ಹಲವು ಮೈಲಿಗಲ್ಲು ಸ್ಥಾಪನೆಯಾಗಿದ್ದು ಭಾರತಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. 2006-16ರ 10 ವರ್ಷದ ಅವಧಿಯಲ್ಲಿ 27.1 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತಲಾಗಿದೆ.

ಜಿಎಸ್ ಟಿಯಿಂದ ಲಾಭ: ಜಿಎಸ್ ಟಿಯಿಂದ ದೇಶಕ್ಕೆ ಲಾಭವಾಗಿದೆ. ನಾವು 16 ಲಕ್ಷ ಮಂದಿ ಹೊಸ ತೆರಿಗೆದಾರರನ್ನು ಸೃಷ್ಟಿಸಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮೂಲಕ ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳನ್ನು ತಲುಪಿದೆ.

ಅರುಣ್ ಜೇಟ್ಲಿಗೆ ಗೌರವ: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಜೇಟ್ಲಿ ಅವಧಿಯಲ್ಲಿ ಜಿಎಸ್ ಟಿ ಬಂದಿದೆ.

ಮೋದಿಗೆ ಬಹುಮತ: 2019ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಸರ್ಕಾರ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದುಮ ದೇಶದ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ