ನಿಯಮಗಳನ್ನು ಉಲಂಘಿಸಿದ ಆರೋಪ ಹಿನ್ನಲೆ-ರೇಸ್‍ಕೋರ್ಸ್ ಲೈಸೆನ್ಸ್ ಅಮಾನತಿನಲ್ಲಿಡಲು ಆರ್ಥಿಕ ಇಲಾಖೆಗೆ ಸೂಚನೆ

ಬೆಂಗಳೂರು,ಡಿ.24- ರೇಸ್‍ಕೋರ್ಸ್ ಲೈಸೆನ್ಸ್ ಅಮಾನತಿನಲ್ಲಿಡಲು ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಸ್‍ಕೋರ್ಸ್ ಮೇಲೆ ನಿಯಮಗಳನ್ನು ಉಲಂಘಿಸಿದ ಆರೋಪವಿದೆ. ಹೀಗಾಗಿ ಸರ್ಕಾರ ಅದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇಂದು ನಡೆದ ಸಮಿತಿ ಸಭೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ರೇಸ್‍ಕೋರ್ಸ್ ಅಮಾನತಿನಲ್ಲಿಡಲು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ 3 ಸಾವಿರ ಕೋಟಿ ರೂ.ಗಳನ್ನು ಮ್ಯೂಚಲ್ ಫಂಡ್‍ನಲ್ಲಿ ಅನಗತ್ಯವಾಗಿ ತೊಡಗಿಸಿರುವ ಬಗ್ಗೆ ಸಿಐಡಿ ತನಿಖೆ ಮುಂದುವರೆಯಲಿದೆ. ಅಗತ್ಯವಿರುವ ಕಡೆಗಳಲ್ಲಿ ಮರು ವಿಚಾರಣೆಯು ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ