ದುರ್ಗಾಪುರ್, (ಪಶ್ಚಿಮ ಬಂಗಾಳ), ಡಿ.25- ರಸ್ತೆ ನಡುವಿನ ಅಂಡರ್ಪಾಸ್ನಲ್ಲಿ ವಿಮಾನ ಸಿಕ್ಕಿ ಹಾಕಿಕೊಂಡ ವಿಚಿತ್ರ ದೃಶ್ಯ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಕಂಡು ಬಂದಿದೆ.
ಆಕಾಶದಲ್ಲಿ ಹಾರಡಬೇಕಿದ್ದ ವಿಮಾನ ಹೈವೇ ಅಂಡರ್ಪಾಸ್ ನಡುವೆ ಸಿಕ್ಕಿ ಹಾಕಿಕೊಂಡಿರುವ ದೃಶ್ಯ ಕಂಡು ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ.
ಶಿಥಿಲಾವಸ್ಥೆಯ ಹಳೆಯ ವಿಮಾನವನ್ನು ಸ್ಥಳಾಂತರಿಸುವ ವೇಳೆ ಟ್ರಕ್ನಲ್ಲಿ ಕೊಂಡೊಯ್ಯುವಾಗ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಅಂಡರ್ಪಾಸ್ನೊಳಗೆ ಸಿಕ್ಕಿಕೊಂಡಿತ್ತು. ನಗರದ ರಾಷ್ಟ್ರೀಯ ಹೆದ್ದಾರಿ -2ರಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ವಿಮಾನವು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿತ್ತು.
ನಿನ್ನೆ ರಾತ್ರಿಯಿಂದ ಇಲ್ಲಿ ಟ್ರಕ್ ಸಿಕ್ಕಿ ಹಾಕಿಕೊಂಡಿತ್ತು. ಇಂಡಿಯಾ ಪೋಸ್ಟ್ಗೆ ಸೇರಿದ ಈ ವಿಮಾನವನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು , ಐಪಾಸ್ನಿಂದ ಅದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.