ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಸಜ್ಜಾಗಿರುವ ಗೋವಾ

ಪಣಜಿ, ಡಿ. 20- ಕರಾವಳಿ ರಾಜ್ಯ ಗೋವಾ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಭಾರತದ ಏಕೈಕ ಲಕ್ಷುರಿ ಕ್ಯಾಸಿನೋ ಡೆಲ್ಟಿನ್ ರಾಯಲ್‍ನಲ್ಲಿ ಇದೇ ಉದ್ದೇಶಕ್ಕಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳಿಗೆ ವೇದಿಕೆ ಸಜ್ಜಾಗಿದೆ.

ಇದಕ್ಕೆ ಪೂರ್ವಭಾವಿಯಾಗಿ ಎಲೆಕ್ಟ್ರಾನಿಕ್ ಕಾರ್ನಿವಲ್ (ವಿದ್ಯುತ್‍ಉತ್ಸವ)ಕ್ಕೆ ಡೆಲ್ಟಿನ್ ಕ್ಯಾಸಿನೋ ಸಾಕ್ಷಿಯಾಯಿತು. ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಗೇಮಿಂಗ್, ಸಂಗೀತ, ನೃತ್ಯ ಮತ್ತು ನಿಯಾನ್ ಪೀವರ್ ವಿಶೇಷ ಆಕರ್ಷಣೆಯಾಗಿತ್ತು.

ಎಲೆಕ್ಟ್ರಾನಿಕ್ ಅಂಡ್ ನಿಯಾನ್ ಈ ಮೆಗಾ ಉತ್ಸವದ ಘೋಷವಾಕ್ಯವಾಗಿತ್ತು. ಬಾಲಿವುಡ್ ಮತ್ತು ಟೆಲಿವಿಷನ್‍ನ 30ಕ್ಕೂ ಹೆಚ್ಚು ತಾರೆಯರು ಈ ಶೋನಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ತಾರಾ ಸ್ಪರ್ಶ ನೀಡಿದರು.

ಪ್ರಾಚಿದೇಸಾಯಿ, ಕಾಜಲ್ ಅಗರ್‍ವಾಲ್, ಸಚಿಜನಾಗಲ್ ರಾಣಿ, ಶ್ರೇಯಾತಲ್ಪಡೆ, ಶರದ್‍ಕೇಲ್ಕರ್, ಊರ್ವಶಿ ಧೋಲಾಕಿಯಾ, ಶಕ್ತಿ ಅರೋರಾ, ಪ್ರಜಾಗೊರ್, ಚಾಹತ್‍ಖನ್ನಾ, ನೇಹಾ ಸೆಕ್ಸಿನಾ, ಇಶಿತಾ ರಾಜ್ ಶರ್ಮ ಗಮನಸೆಳೆದರು.

ಖ್ಯಾತ ನಾಯಕಿಯರಾದ ಅಕಾಶ ಸಿಂಣ್, ದೇವ್ ನೇಗಿ, ಡಿಜೆರಿಂಕ್ ಮತ್ತು ಹಲವಾರು ಬ್ಯಾಂಡ್‍ಗಳು ಉತ್ಸವದ ಮೆರಗು ಹೆಚ್ಚಿಸಿತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ