ಬೆಂಗಳೂರು, 18ನೇ ಡಿಸೆಂಬರ್ 2019: ಪ್ರೈಮ್ ಕೇರ್ ಅತ್ಯುತ್ತಮ ಫಲವತ್ತತೆ ಚಿಕಿತ್ಸೆಯ ಗುರಿ ಹೊಂದಿರುವ ನೂತನ ಎಂಬ್ರೇಸ್ ಫರ್ಟಿಲಿಟಿ ಕೇಂದ್ರಕ್ಕೆ ಚಾಲನೆ ನೀಡಿದೆ. ಸ್ಟೇಟ್ ಆಫ್ ಆರ್ಟ್ ನ ಎಂಬ್ರೇಸ್ ಫರ್ಟಿಲಿಟಿ ಸೆಂಟರ್ ಅತ್ಯುನ್ನತ ಕೌಶಲ್ಯಯುತ ತಜ್ಞರನ್ನು ಹೊಂದಿದ್ದು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಚಿಕಿತ್ಸೆಯನ್ನು ಒಳಗೊಂಡಿದೆ.
ಈ ಕೇಂದ್ರ ಪುರುಷ ಹಾಗು ಮಹಿಳೆಯರಿಗೆ ಕೌನ್ಸೆಲಿಂಗ್, ಅಲ್ಟ್ರಾಸೌಂಡ್ ನಿರ್ವಹಣೆ, ಮಹಿಳೆ ಮತ್ತು ಪುರುಷರ ಫಲವತ್ತತೆ ಮೌಲ್ಯಮಾಪನ, ಇನ್ ಟ್ರಾಟೆರೈನ್ ಇನ್ ಸೆಮಿನೇಷನ್ (ಐಯುಐ), ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್), ಇನ್ ಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್ ಐ) ಮತ್ತಿತರರ ಸೇವೆಗಳನ್ನು ಒದಗಿಸಲಿದೆ. ಈ ಕೇಂದ್ರ ದಾನಿಗಳ ಅಂಡಾಣು/ ವೀರ್ಯಾಣು/ ಅಥವಾ ಬಾಡಿಗೆ ತಾಯಿಯ ಯೋಜನೆಯನ್ನು ವಿಶ್ವಾಸವಿಟ್ಟಿಲ್ಲ. ಬದಲಿಗೆ, ರೋಗಿಗಳ ಅಂಡಾಣು, ವೀರ್ಯಾಣು ಮೂಲಕ ಮಗುವಿಗೆ ಜನ್ಮ ನೀಡುವ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದೆ.
ನಾವು ಮಹಿಳಾ ಸ್ನೇಹಿ ಐವಿಎಫ್ ಚಿಕಿತ್ಸೆ ಒದಗಿಸುತ್ತೇವೆ. ಅದು ತಾಯಿ ಹಾಗೂ ಮಕ್ಕಳಿಗೆ ಉತ್ತಮ ಫಲಿತಾಂಶ ನೀಡುತ್ತದೆ. ಐವಿಎಫ್ ಯೋಜನೆ ಪ್ರಮುಖವಾಗಿ ಅಂಡಾಣುವಿನ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಮಹಿಳೆಯರಿಗೆ ಸಂತಾನೋತ್ಪತ್ತಿಯ ಸಮಸ್ಯೆ ನಿವಾರಿಸುವ ಸಂಪೂರ್ಣ ರುಜುವಾತಾದ ಫಲವತ್ತತೆಯ ಚಿಕಿತ್ಸೆಗೆ ಪ್ರೋತ್ಸಾಹಿಸುವುದು ನಮ್ಮ ದೃಷ್ಟಿಕೋನ.
“ಸಂತಾನದ ಕೊರತೆ ಭಾವನಾತ್ಮಕ ಹಾಗೂ ದೈಹಿಕವಾಗಿ ಕೂಡ ನೋವು ತರುವಂತದ್ದಾಗಿದೆ ಮತ್ತು ಅದು ಜೀವನದ ಅತಿ ಒಂಟಿತನದ ಪಯಣವಾಗಿದೆ” ಭಾರತೀಯ ನೆರವಿನ ಸಂತಾನೋತ್ಪತ್ತಿ ಸೊಸೈಟಿಯ ಪ್ರಕಾರ- ಭಾರತದಲ್ಲಿ ಶೇ. 10 ರಿಂದ 14 ರಷ್ಟು ವಿವಾಹಿತ ದಂಪತಿಗಳು ಫಲವತ್ತತಯ ಕೊರತೆಯನ್ನು ಅನುಭವಿಸುತ್ತಾರೆ. ಮಗುವನ್ನು ಬಯಸುವ ಸುಮಾರು 27.5 ಮಿಲಿಯನ್ ದಂಪತಿಗಳು ಈ ಸಮಸ್ಯೆಗೆ ಗುರಿಯಾಗುತ್ತಾರೆ.
ಬಂಜೆತನಕ್ಕೆ ಕೆಲವು ಕಾರಣಗಳೆಂದರೆ ಜೀವನ ಶೈಲಿ, ವಿವಾಹದ ವಯಸ್ಸು ಹೆಚ್ಚಳ, ಮದ್ಯಪಾನ, ಧೂಮಪಾನದ ಅತಿಯಾದ ಸೇವನೆ, ಬೊಜ್ಜು. ಕ್ಲಿನಿಕಲ್ ಅಂಶಗಳು ವೈದ್ಯಕೀಯ ಸ್ಥಿತಿಗತಿಗಳಾದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಟ್ಯೂಬಲ್ ಅಂಶಗಳು, ಎಂಡೊಮೆಟ್ರಿಯೊಸಿಸ್ ಮತ್ತು ಅಂಡಾಶಯಗಳ ಅಸಹಜತೆಗಳು, ಫಾಲೋಪಿಯನ್ ಟ್ಯೂಬ್ಗಳು, ಅಥವಾ ಗರ್ಭಾಶಯ ಮತ್ತು ವೀರ್ಯ ಸಾರಿಗೆ ಅಸ್ವಸ್ಥತೆಗಳು, ಅಜೋಸ್ಪೆರ್ಮಿಯಾ, ಆಲಿಗೋಸ್ಟೆನೋಟೆರಾಟೊಜೂಸ್ಪೆರ್ಮಿಯಾ, ಹೈಪೋಸ್ಪೆರ್ಮಿಯಾ ಮುಂತಾದ ವೈದ್ಯಕೀಯ ಪರಿಸ್ಥಿತಿಗಳ ಹರಡುವಿಕೆಯನ್ನು ಹೆಚ್ಚಿಸುತ್ತಿವೆ.
ಅಚ್ಚರಿಯ ಸಂಗತಿಯೆಂದರೆ ಕೇವಲ ಶೇ. 45ರಷ್ಟು ದಂಪತಿಗಳು ಗರ್ಭಧಾರಣೆಯ ಪ್ರಯತ್ನದಲ್ಲಿದ್ದಾಗ ವೈದ್ಯರನ್ನು ಭೇಟಿ ಮಾಡುತ್ತಾರೆ; ಕೇವಲ ಶೇ. 1 ರಷ್ಟು ದಂಪತಿಗಳು ಮಾತ್ರ ಚಿಕಿತ್ಸೆಗೆ ಮುಂದಾಗುತ್ತಾರೆ. ಮತ್ತು ಇನ್ನೂ ಕೆಟ್ಟದೆಂದರೆ, ಶೇ. 55ರಷ್ಟು ಮಹಿಳೆಯರು ಫಲವತ್ತತೆ ಗ್ಯಾಜೆಟ್ನಂತಹ ಅಂಡೋತ್ಪತ್ತಿ ಟ್ರ್ಯಾಕಿಂಗ್ ಉತ್ಪನ್ನಗಳ ಬಗ್ಗೆ ತಿಳಿದಿರುವುದಿಲ್ಲ ಮತ್ತು 75% ಪುರುಷರಿಗೂ ತಿಳಿದಿರುವುದಿಲ್ಲ.
ಪ್ರೈಮ್ಕೇರ್ನ ಎಂಬ್ರೇಸ್ ಫಲವತ್ತತೆ ಕೇಂದ್ರದ ನಿರ್ದೇಶಕ ಡಾ.ರಿಜ್ವಾನಾ ಇಕ್ಬಾಲ್ ಅವರು, “ಯುವ ವಿವಾಹಿತ ದಂಪತಿಗಳಲ್ಲಿಯೂ ಬಂಜೆತನ ಹೆಚ್ಚುತ್ತಿದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಅಂಡೋತ್ಪತ್ತಿ ಅಸ್ವಸ್ಥತೆ ಮತ್ತು ಪುರುಷರಲ್ಲಿ ಅಸಹಜ ವೀರ್ಯ ನಿಯತಾಂಕಗಳಿಂದ ಉಂಟಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕೂಡ ಪುರುಷರು ಮತ್ತು ಮಹಿಳೆಯರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದಲ್ಲದೆ, ಸ್ಥೂಲಕಾಯತೆ ಮತ್ತು ಧೂಮಪಾನದಂತಹ ಜೀವನಶೈಲಿ ಪ್ರೇರಿತ ಕಾಯಿಲೆಗಳು ಹೆಚ್ಚಿನ ಬಂಜೆತನದ ಪ್ರಮಾಣಕ್ಕೆ ಕಾರಣವಾಗಿವೆ. ತಡವಾಗಿ ಮದುವೆಯಾಗುವ ಪ್ರವೃತ್ತಿಯ ಜೊತೆಗೆ, ಮಹಿಳೆಯರು 35 ವರ್ಷ ದಾಟಿದಾಗ ಅವರ ಫಲವತ್ತತೆ ಸಾಮರ್ಥ್ಯವು ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ಮಹಿಳೆಯರು ವಿಫಲರಾಗುತ್ತಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ದಂಪತಿಗಳು ಮಗುವಿಗೆ ಪ್ರಯತ್ನಿಸುತ್ತಿದ್ದು, ವಿಫಲವಾಗಿದ್ದರೆ, ಅವರು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚಿನ ತೊಂದರೆಗಳನ್ನು ತಪ್ಪಿಸಲು ಸಮಯೋಚಿತ ನೆರವನ್ನು ಪಡೆಯಬೇಕು. ಶೀಘ್ರದಲ್ಲೇ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ಬಂಜೆತನ ತಜ್ಞರ ಉತ್ತಮ ಬಂಜೆತನ ಕೇಂದ್ರವನ್ನು ಸಂಪರ್ಕಿಸುವುದು ಸಹ ಅಷ್ಟೇ ಮುಖ್ಯವಾಗಿದೆ.” ಎಂದರು.
ಪ್ರೈಮ್ಕೇರ್ ಆಸ್ಪತ್ರೆಯ ಅಧ್ಯಕ್ಷ ಮತ್ತು ಸಿಇಒ ಡಾ. ಸೈಯದ್ ಸಯೀದ್ ಅಹ್ಮದ್, “ಭಾರತದಲ್ಲಿ “ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜೀಸ್ (ಎಆರ್ಟಿ)” ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ. ತಾಂತ್ರಿಕ ಪ್ರಗತಿಗಳು ಮತ್ತು ತಜ್ಞ ವೈದ್ಯರು ಬಂಜೆತನ ಚಿಕಿತ್ಸೆಗಳ ಹೆಚ್ಚಿನ ಯಶಸ್ಸಿಗೆ ಕಾರಣರಾಗಿದ್ದಾರೆ. ನಾವು ಸಂಪೂರ್ಣ ನೈತಿಕ ಮತ್ತು ನವೀಕರಿಸಿದ ವೈದ್ಯಕೀಯ ವಿಧಾನಗಳೊಂದಿಗೆ, ಐಸಿಎಸ್ಐ, ಐವಿಎಫ್, ಐಯುಐ, ಇನ್ವಿಟ್ರೊ ಮೆಚ್ಯುರೇಷನ್ (ಐವಿಎಂ), ಭ್ರೂಣಗಳು ಮತ್ತು ಆಸೈಟ್ಗಳ ಘನೀಕರಿಸುವಿಕೆ ಮತ್ತು ಕರಗಿಸುವಿಕೆ, ಅನ್ಯೂಪ್ಲಾಯ್ಡಿಗಳಿಗೆ ಪೂರ್ವಭಾವಿ ಆನುವಂಶಿಕ ಪರೀಕ್ಷೆ (ಪಿಜಿಟಿ-ಎ) ಮತ್ತು ಭಾರತದಲ್ಲಿ ಲೇಸರ್ ನೆರವಿನ ಹ್ಯಾಚಿಂಗ್ ಭ್ರೂಣ ವರ್ಗಾವಣೆಯಂತಹ ಹಲವಾರು ಸುಧಾರಿತ ಎಆರ್ಟಿ ತಂತ್ರಗಳನ್ನು ಹೊಂದಿದ್ದೇವೆ ಎಂಬುದು ನಮ್ಮ ಹೆಮ್ಮೆ. ಎಂದರು.
ಎಂಬ್ರೇಸ್ ಐವಿಎಫ್ ಫಲವತ್ತತೆ ಕೇಂದ್ರ, ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು, ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದು, ವೈಜ್ಞಾನಿಕ ಆಧಾರಿತ ವಿಧಾನದೊಂದಿಗೆ ದೇಶದ ಇತರ ಭಾಗಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ವೇಗವಾಗಿ ವಿಸ್ತರಿಸಲು ಮುಂದಾಗಿ