ವಾಹನ ಸವಾರರೆ ಇಂದಿನಿಂದ ನಿಮ್ಮ ವಾಹನಕ್ಕೆ ಇದು ಕಡ್ಡಾಯ

ನವದೆಹಲಿ: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಓಡಾಟ ನಡೆಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ (FASTag) ಕಡ್ಡಾಯಗೊಳಿಸಲಾಗಿದೆ. ಡಿಜಿಟಲ್ ಪೇಮೆಂಟ್ ಗೆ ಒತ್ತು ನೀಡಲು, ವಾಯು ಮಾಲಿನ್ಯ ತಡೆಗಟ್ಟಲು ಹಾಗೂ ಟೋಲ್ ನಾಕಾಗಳ ಮೇಲೆ ವಾಹನಗಳ ಸರದಿಯಿಂದ ಮುಕ್ತಿ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಸಕಲ ಸಿದ್ಧತೆ ಕೈಗೊಂಡಿದ್ದು, ಇಂದಿನಿಂದ ಇದು ಜಾರಿಗೆ ಬಂದಿದೆ. ಇದಕ್ಕೂ ಮೊದಲು ಡಿಸೆಂಬರ್ 1ಕ್ಕೆ ಇದನ್ನು ಜಾರಿಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಬಳಿಕ ಇದನ್ನು ವಿಸ್ತರಿಸಿ ಡಿಸೆಂಬರ್ 15 ದಿನಾಂಕವನ್ನು ನಿಗದಿಪಡಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ NHAI ಹೇಳಿಕೆ ಪ್ರಕಟಿಸಿದ್ದು, ಫಾಸ್ಟ್ ಟ್ಯಾಗ್ ನಿಂದ ಬಚಾವಾಗಲು ಇನ್ಮುಂದೆ ಸಾಧ್ಯವಿಲ್ಲ ಹಾಗೂ ದಿನಾಂಕ ಕೂಡ ಮುಂದೂಡಲಾಗುವುದಿಲ್ಲ ಎಂದಿದೆ. ಆದ್ದರಿಂದ ಹೈವೇಗಳ ಮೇಲೆ ತಮ್ಮ ವಾಹನಗಳನ್ನು ಓಡಿಸುವ ವಾಹನ ಸವಾರರು ತಮ್ಮ ಅನುಕೂಲಕ್ಕಾಗಿ ಫಾಸ್ಟ್ ಟ್ಯಾಗ್ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಫಾಸ್ಟ್ ಟ್ಯಾಗ್ ಲೈನ್ ನಿಂದ ವಾಹನಗಳನ್ನು ಸಾಗಿಸಿಕೊಂಡು ಹೋಗುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಹೇಳಿರುವ NHAI ಟೋಲ್ ನಾಕಾಗಳಿಂದ ವಾಹನ ಸಾಗಿಸುವಾಗ ಅವಸರ ಮಾಡಬಾರದು ಹಾಗೂ ಈ ವೇಳೆ ಹಿಂದಿನಿಂದ ಬರುವ ವಾಹನ ಸವಾರರೂ ಕೂಡ ತಮ್ಮ ವಾಹನದ ವೇಗಕ್ಕೆ ಕಡಿವಾಣ ಹಾಕಬೇಕು ಎಂದಿದೆ. ಇಲ್ಲದೆ ಹೋದಲ್ಲಿ ಅವಸರದಲ್ಲಿ ಬ್ಯಾರಿಯರ್ ಕುಸಿದು ನಿಮ್ಮ ವಾಹನಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದೆ.

ಫಾಸ್ಟ್ ಟ್ಯಾಗ್ ವ್ಯವಸ್ಥೆ ಸಂಪೂರ್ಣ ಜಾರಿಗೆ ಬಂದ ಬಳಿಕ ಒಂದು ವೇಳೆ ಹೈವೇಗಳ ಮೇಲೆ ಟ್ರಾಫಿಕ್ ಹೆಚ್ಚಾಗಿದ್ದು ಮತ್ತು ಇದರಿಂದ ಸಾರ್ವಜನಿಕರಿಗೆ ತೊದರೆ ಉಂಟಾಗುತ್ತಿದ್ದರೆ, ಟೋಲ್ ನಾಕಾಗಳ ಮೇಲಿನ ಶೇ.25ರಷ್ಟು ಲೇನ್ ಗಳನ್ನು ಮ್ಯಾನ್ಯುಅಲ್ ನಿಯಂತ್ರಿಸಬಹುದಾಗಿದೆ ಎಂದು NHAI ನಿರ್ದೇಶನ ನೀಡಿದೆ. ಆದರೆ, ಯಾವುದೇ ಸಂದರ್ಭದಲ್ಲಿ ಈ ಸಂಖ್ಯೆಯಲ್ಲಿ ಏರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಫಾಸ್ಟ್ ಟ್ಯಾಗ್ ಬಳಸಲು ವಾಹನಗಳಿಗೆ ಪ್ರೋತ್ಸಾಹಿಸಬೇಕು ಏನು ತನ್ನ ನಿರ್ದೇಶನಗಳಲ್ಲಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ