ಚೆನ್ನೈ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಂಗಳವಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಸುಮಾರು ಮೂರು ದಶಕಗಳಿಂದ ದೇಶದಲ್ಲಿ ನಿಶ್ರಾರಿತರಾಗಿ ತಂಗಿರುವ ಶ್ರೀಲಂಕಾದ 1 ಲಕ್ಷ ತಮಿಳರಿಗೂ ಪೌರತ್ವನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಮನವಿ ಮಾಡಿರುವ ರವಿಶಂಕರ್ ಗುರೂಜಿ, ಸುಮಾರು 35 ವರ್ಷದಿಂದ ಶ್ರೀಲಂಕಾದ ತಮಿಳರು ನಿರಾಶ್ರಿತರಾಗಿ ದೇಶದಲ್ಲಿ ತಂಗಿದ್ದು, ಅವರಿಗೂ ಕೇಂದ್ರ ಸರ್ಕಾರ ಭಾರತದ ಪೌರತ್ವ ನೀಡಬೇಕು ಎಂದು ತಿಳಿಸಿದ್ದಾರೆ. ಜತೆಗೆ ತಮ್ಮ ನೆಲೆಯನ್ನು ಕಳೆದುಕೊಂಡಿರುವ ಈ 1 ಲಕ್ಷ ತಮಿಳುಗರಿಗೆ ಮಾನವೀಯತೆ ಆಧಾರದ ಮೇಲೆ ತಿದ್ದುಪಡಿ ಕಾಯ್ದೆ ಪೌರತ್ವ ನೀಡಲಿದೆಯೇ ?ಎಂದು ಕೂಡ ಟ್ವೀಟ್ ಮಾಡಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಪೌರತ್ವ ತಿದ್ದು ಪಡಿ ಮಸೂದೆ ಅಂಗೀಕಾರ ಪಡೆದುಕೊಂಡ ಬೆನ್ನಲ್ಲೇ , ರವಿಶಂಕರ್ ಗುರೂಜಿ ಪ್ರಸ್ತುತ ಹೇಳಿಕೆ ನೀಡಿದ್ದಾರೆ. ರವಿಶಂಕರ್ ಗುರೂಜಿಯೊಂದಿಗೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತರಚನೆಕಾರ ವೈರಾಮುತ್ತು ಕೂಡ ಶ್ರೀಲಂಕಾ ತಮಿಳಿಗರಿಗೂ ಪೌರತ್ವ ನೀಡುವಂತೆ ಒತ್ತಾಯಿಸಿದ್ದಾರೆ.