ಮೇಲಾಧಿಕಾರಿಯನ್ನು ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ

ರಾಂಚಿ, ಡಿ.9-ಛತ್ತೀಸ್‍ಗಢ ಸಶಸ್ತ್ರ ಪಡೆ (ಸಿಎಎಫ್) ಯೋಧನೊಬ್ಬ ತನ್ನ ಮೇಲಾಧಿಕಾರಿಯನ್ನು ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ರಾಂಚಿಯಲ್ಲಿ ನಡೆದಿದೆ.

ಮೇಳ ರಾಮೋರ್ ಯೋಧನಿಂದ ಹತರಾದ ಸಿಎಎಫ್ ಕಮಾಂಡರ್ ಎಂದು ಗುರುತಿಸಲಾಗಿದೆ. ವಿಕ್ರಮ್ ರಾಜ್‍ಬಡಿ ಎಂಬ ಯೋಧ ರಾಮೋರ್ ಅವರನ್ನು ಕೊಂದು ತಾನೂ ಸಾವಿಗೆ ಶರಣಾಗಿದ್ದಾನೆ.

ಛತ್ತೀಸ್‍ಗಢ ವಿಧಾನಸಭಾ ಚುನಾವಣೆಗಾಗಿ ಇವರಿಬ್ಬರನ್ನು ನಿಯೋಜಿಸಲಾಗಿತ್ತು. ಇಂದು ಬೆಳಗ್ಗೆ 6.30ರಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಇವರಿಬ್ಬರ ನಡುವೆ ಆರಂಭವಾದ ಜಗಳ ಕಮಾಂಡರ್ ಹತ್ಯೆ ಮತ್ತು ಯೋಧನ ಆತ್ಮಹತ್ಯೆಯಲ್ಲಿ ಪರ್ಯವಸಾನವಾಯಿತು.

ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ