ನವದೆಹಲಿ, ಡಿ.9-ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಡಿ.16 ರಂದು ಬೆಳಗ್ಗೆ 5 ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗುತ್ತದೆ.
ಅತ್ಯನ್ನುತ ವಿಶ್ವಸನೀಯ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ನಿರ್ಭಯಾ ಅತ್ಯಾಚಾರಿ ಮತ್ತು ಹಂತಕರ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯ ಸರಾಸಗಟಾಗಿ ತಳ್ಳಿ ಹಾಕಿ ಅಂತಿಮ ನಿರ್ಧಾರಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಾಗಿತ್ತು.
ರಾಷ್ಟ್ರಪತಿಯವರು ನಾಲ್ವರು ಆಪಾದಿತರಿಗೆ ಮರಣದಂಡನೆಯಿಂದ ಕ್ಷಮಾದಾನ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ಡಿ.16 ರಂದು ಬೆಳಗ್ಗೆ 5 ಗಂಟೆಗೆ ನಾಲ್ವರು ಆರೋಪಿಗಳನ್ನು ನೇಣುಗಂಬಕ್ಕೇರಿಸಲಾಗುತ್ತದೆ ಎಂಬುದು ಖಚಿತವಾಗಿದೆ.
ಪೈಶಾಚಿಕ ಕೃತ್ಯ ನಡೆದ ಏಳು ವರ್ಷಗಳ ನಂತರ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಈ ಅಪರಾಧಿಗಳಿಗೆ ಗಲ್ಲಿಗೇರಿಸಲಾಗುತ್ತಿದ್ದು, ನಿರ್ಭಯಾ ಕುಟುಂಬಕ್ಕೆ ಕೊನೆಗೂ ನ್ಯಾಯ ಲಭಿಸಿದೆ.