
ತುಮಕೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಈ ಹಿಂದೆ ಸದನದಲ್ಲಿ ಡಿ.ಕೆ ಶಿವಕುಮಾರ್, ಸಿಎಂ ಯಡಿಯೂರಪ್ಪ ಅವರ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆ ಮಾತುಗಳು ಸಖತ್ ವೈರಲ್ ಆಗಿದೆ.
ಯಡಿಯೂರಪ್ಪ ಅವರ ಛಲವನ್ನು ನಾನು ಅಭಿನಂದಿಸುತ್ತೆನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಅಲ್ಲದೆ ಯಶಸ್ಸು ಕಾಣಬೇಕಾದರೇ ಧರ್ಮರಾಯನ ಧರ್ಮತ್ವ ಇರಬೇಕು, ದಾನಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ಭೀಮನ ಬಲ, ವಿದೂರನ ನೀತಿ, ಕೃಷ್ಣನ ತಂತ್ರ ಜೊತೆಗೆ ಯಡಿಯೂರಪ್ಪರ ಛಲವೂ ಬೇಕು ಎಂದು ಡಿಕೆ ಶಿವಕುಮಾರ್ ಬಿಎಸ್‍ವೈರನ್ನು ಹಾಡಿಹೊಗಳಿದ್ದರು.
ಯಡಿಯೂರಪ್ಪನವರನ್ನು ಧರ್ಮರಾಯ, ಕರ್ಣ, ಅರ್ಜುನ, ಭೀಮ, ವಿದೂರ, ಕೃಷ್ಣನಿಗೆ ಹೋಲಿಕೆ ಮಾಡಿ ಛಲದಂಕ ಮಲ್ಲ ಎಂದು ಬಣ್ಣಿಸಿದ್ದರು. ಪ್ರಸ್ತುತ ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದು ಸಿಎಂ ಯಡಿಯೂರಪ್ಪರ ಬೀಗುತ್ತಿದ್ದಂತೆ ಡಿಕೆಶಿ ಸಲ್ಲಿಸಿದ್ದ ಅಭಿನಂದನೆ ವಿಡಿಯೋ ವೈರಲ್ ಆಗಿದೆ. 29 ಸೆಕೆಂಡಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.