![CKB](http://kannada.vartamitra.com/wp-content/uploads/2019/12/CKB-678x373.jpg)
ಚಿಕ್ಕಬಳ್ಳಾಪುರ: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಇಂದು ಭರ್ಜರಿಯಾಗಿ ಚಿಕನ್ ಪಾಲಿಟಿಕ್ಸ್ ಜೋರಾಗಿದೆ. ಗ್ರಾಮಗಳಲ್ಲಿ ಮತದಾರರಿಗೆ ಕೋಳಿ ಹಂಚಿಕೆ ಮಾಡಿ ಮತಯಾಚನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ಚಿಕ್ಕ ಪೈಲಗುರ್ಕಿ, ದೊಡ್ಡಪೈಗುರ್ಕಿ, ಸಾಮಸೇನಹಳ್ಳಿ ಗ್ರಾಮಗಳಲ್ಲಿ ಹಂಚಿಕೆ ಮಾಡಲಾಗಿದೆ. ಆಪೆ ಆಟೋ ಮೂಲಕ ಕೋಳಿ ತಂದು ಗ್ರಾಮಸ್ಥರಿಗೆ ಹಂಚಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್ಸಿನಿಂದ ಅನರ್ಹಗೊಂಡ ಎಲ್ಲಾ 15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯುತ್ತಿದೆ. 9 ರಂದು ಫಲಿತಾಂಶ ಹೊರಬೀಳಲಿದ್ದು ಎಲ್ಲರ ಚಿತ್ತ ರಾಜ್ಯ ರಾಜಕೀಯದತ್ತ ನೆಟ್ಟಿದೆ.