ಬೆಂಗಳೂರು,ನ.23-ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿ ಮಾರ್ಗಗಳಲ್ಲಿ ಕೆಎಸ್ಆರ್ಟಿಸಿಯು ಐರಾವತ ಕ್ಲಬ್ಕ್ಲಾಸ್ ಬಸ್ ಸೇವೆಯನ್ನು ಪ್ರಾರಂಭಿಸಿದೆ.
ಬೆಂಗಳೂರು ಕೇಂದ್ರೀಯ ವಿಭಾಗದಿಂದ ನಿನ್ನೆಯಿಂದಲೇ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆ ಪ್ರಾರಂಭವಾಗಿದೆ. ಬೆಂಗಳೂರಿನಿಂದ ವಿರಾಜಪೇಟೆಗೆ ಹೋಗುವ ಬಸ್ಗಳು ಮೈಸೂರು ಹಾಗೂ ಗೋಣಿಗೊಪ್ಪ ಮಾರ್ಗವಾಗಿ ತೆರಳಲಿದೆ.
ಮಡಿಕೇರಿಗೆ ಹೋಗುವ ಬಸ್, ಮೈಸೂರು ಮತ್ತು ಕುಶಾಲನಗರ ಮಾರ್ಗವಾಗಿ ತೆರಳಿದ್ದು, ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ಬಸ್ ವಿರಾಜಪೇಟೆಗೆ ರಾತ್ರಿ 9.45ಕ್ಕೆ ತಲುಪಲಿದೆ. ವಿರಾಜಪೇಟೆಯಿಂದ ಬೆಳಗ್ಗೆ8.30ಕ್ಕೆ ಬಿಡುವ ಬಸ್ ಮಧ್ಯಾಹ್ನ 1.20ಕ್ಕೆ ಬೆಂಗಳೂರು ತಲುಪಲಿದೆ. ಈ ಬಸ್ಗಳಿಗೆ 530 ರೂ.ಟಿಕೆಟ್ ದರ ನಿಗದಿಪಡಿಸಲಾಗಿದೆ.
ಬೆಂಗಳೂರಿನಿಂದ ಮಡಿಕೇರಿಗೆ ತೆರಳುವ ಬಸ್ ಮುಂಜಾನೆ5.30ಕ್ಕೆ ಹೊರಡಲಿದೆ. ಮಧ್ಯಾಹ್ನ 12 ಗಂಟೆಗೆ ಮಡಿಕೇರಿ ತಲುಪಲಿದೆ. ಮಡಿಕೇರಿಯಿಂದ ಮಧ್ಯಾಹ್ನ 2.30ಕ್ಕ ಹೊರಡುವ ಬಸ್ ಬೆಂಗಳೂರನ್ನು ರಾತ್ರಿ 8.30ಕ್ಕೆತಲುಪಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.