
ನವದೆಹಲಿ: ಉತ್ತಮ ಸಮನ್ವಯಕ್ಕಾಗಿ ಮೂರು ಸೇನಾ ಪಡೆಗಳಿಗೆ ಹೊಸ ಮುಖ್ಯಸ್ಥರೊಬ್ಬರನ್ನು ನೇಮಕ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಬರುವ ಜನವರಿಯೊಳಗೆ ಆ ನೇಮಕಾತಿಯನ್ನು ಪೂರ್ಣಗೊಳಿಸುವ ನಿರೀಕ್ಷೆಗಳಿವೆ.
ರಕ್ಷಣಾ ಪಡೆಗಳ ಮುಖ್ಯಸ್ಥ ಎಂಬ ಹೆಸರಿನ ಹುದ್ದೆ ಇದಾಗಿದೆ. ಹಾಲಿ ಭೂಸೇನಾ ಮುಖ್ಯಸ್ಥರಾಗಿರುವ ಡಿ.31ರಂದು ನಿವೃತ್ತರಾಗಲಿರುವ ಜನರಲ್ ಬಿಪಿನ್ ರಾವತ್ ಅವರಿಗೆ ಆ ಹುದ್ದೆ ಒಲಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಿಗೆ ಪ್ರತ್ಯೇಕ ಮುಖ್ಯಸ್ಥರಾಗಿದ್ದಾರೆ. ಈ ಮೂರು ಪಡೆಗಳ ಮುಖ್ಯಸ್ಥ ಜೊತೆಗೆ ಸಮನ್ವಯ ಸಾಧಿಸಿ ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ನೇರವಾಗಿ ವರದಿ ಮಾಡಿಕೊಳ್ಳಲು ಪ್ರತ್ಯೇಕ ಹುದ್ದೆ ಸೃಷ್ಟಿಸಬೇಕು ಎಂದು ಕಾರ್ಗಿಲ್ ಸಮರ ಕುರಿತಾದ ಸಮಿತಿ 1999ರಲ್ಲೇ ಶಿಫಾರಸು ಮಾಡಿತ್ತು. ಆ.15ರ ಸ್ವಾತಂತ್ರ್ಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಘೋಷಣೆ ಮಾಡಿದ್ದರು.
ಹೊಸ ಹುದ್ದೆಯ ಹೊಣೆಗಾರಿಕೆ ನಿರ್ಧರಿಸಲು ಅಂತಿಮಗೊಳಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.