ಲೇಸ್ ಆಮ್ಲೆಟ್ ತಯಾರಿಸಿದ ರಾಗಿಣಿಗೆ ನೆಟ್ಟಿಗರಿಂದ ತರಾಟೆ

ಬೆಂಗಳೂರು: ಸ್ಯಾಂಡಲ್‍ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಲೇಸ್‍ನಲ್ಲಿ ಆಮ್ಲೆಟ್ ತಯಾರಿಸಿದ್ದಕ್ಕೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ರಾಗಿಣಿ ತಮ್ಮ ಮನೆಯಲ್ಲಿ ಹೊಸ ರೆಸಿಪಿಯನ್ನು ತಯಾರಿಸಿದ್ದರು. ಅಡುಗೆ ಮಾಡುತ್ತಿರುವ ವಿಡಿಯೋವನ್ನು ರಾಗಿಣಿ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಗಿಣಿ ಅವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂ

ಡಿದ್ದಾರೆ.

ವಿಡಿಯೋದಲ್ಲಿ ರಾಗಿಣಿ ‘ಲೇಸ್ ಆಮ್ಲೆಟ್’ ಎನ್ನುವ ಹೊಸ ರೆಸಿಪಿ ಮಾಡಿದ್ದಾರೆ. ಮೊದಲಿಗೆ ನಾಲ್ಕು ಮೊಟ್ಟೆಯನ್ನು ಒಂದು ಬೌಲ್‍ಗೆ ಹಾಕಿಕೊಂಡು, ಅದಕ್ಕೆ ಈರುಳ್ಳಿ, ಮಸಾಲೆ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿದ್ದಾರೆ. ನಂತರ ಅದನ್ನು ಲೇಸ್ ಚಿಪ್ಸ್ ಪಾಕೆಟ್‍ಗೆ ಸ್ವಲ್ಪ ಹಾಕಿ ಕುದಿಯುತ್ತಿರು

ವ ನೀರಿನೊಳಗೆ ಇಟ್ಟು ಬೇಯಿಸಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ರಾಗಿಣಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಈ ರೀತಿ ಪ್ಲಾಸ್ಟಿಕ್‍ನೊಳಗೆ ಬೇಯಿಸಿದ ಆಹಾರ ತಿನ್ನಬಾರದು, ಇದು ವಿಷ. ನಿ

ಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಇದೇನಾ ನೀವು ಹೇಳುವ ಸಂದೇಶ ಎಂದು ರಾಗಿಣಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ರಾಗಿಣಿ ತಯಾ

ರಿಸಿದ ಈ ಹೊಸ ರೆಸಿಪಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು, ರೆಪಿಸಿ ತುಂಬಾ ಚೆನ್ನಾಗಿದೆ ನಾವು ಮನೆಯಲ್ಲಿ ಟ್ರೈ ಮಾಡುತ್ತೇವೆ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ