ಮಿಸ್ ಇಂಡಿಯಾ ಗೆದ್ದ ಬೀದರ್ ನ ಬೆಡಗಿ ನಿಶಾ ತಾಳಂಪಳ್ಳಿ

ಬೀದರ:  ಜಿಲ್ಲೆಯ ಕುಗ್ರಾಮ ಧುಮ್ಮನಸೂರಿನ ಬೆಳಗಿ ನಿಶಾ ತಾಳಂಪಳ್ಳಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾಳೆ.

ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜಕಾರ್ತಾದಲ್ಲಿ ಆಯೋಜಿಸಿದ್ದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ 2019 ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ನ.18 ರಂದು ನಡೆದ ಫೈನಲ್ ನಲ್ಲಿ ನಿಶಾ ಮಿಸ್ ಇಂಡಿಯಾ ಕಿರೀಟ ಧರಿದ್ದಾರೆ. ದೇಶದ ವಿವಿಧೆಡೆಯಿಂದ 30  ಜನ ಮಾಡೆಲ್ ಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಸ್ಪರ್ಧಿಸಿದ್ದ ನಿಶಾ ಏಕೈಕ ಬೆಡಗಿ.

ಹುಮನಾಬಾದ, ಬೀದರನಲ್ಲಿ ಶಿಕ್ಷಣ ಮುಗಿಸಿರುವ ನಿಶಾ ನಂತರ ಹೈದ್ರಾಬಾದನಲ್ಲಿ ಡಿಪ್ಲೋಮಾ ಇನ್ ಏವಿಏಷನ್ ಕಲಿತು, ನಂತರ ಒಂದು ತಂಗಳು ಮಾಡೆಲಿಂಗ್ ತರಬೇತಿ ಪಡೆದಿದ್ದರು. ತಂದೆ ಶ್ರೀನಿವಾಸ ತಾಳಂಪಳ್ಳಿ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕ್ಯಾಶಿಯರ್ ಆಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ