ಮೈಕೊಡವಿ ಎದ್ದ ಎಲ್ಲಾ ರಾಜಕೀಯ ಪಕ್ಷಗಳು

ಬೆಂಗಳೂರು,ನ.15-ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಮೈಕೊಡವಿ ಎದ್ದಿವೆ.

ಆಡಳಿತಾರೂಢ ಬಿಜೆಪಿ 15 ಕ್ಷೇತ್ರಗಳನ್ನು ಗೆದ್ದು ರಣಕೇಕೆ ಹಾಕಲು ಮುಂದಾಗಿದೆ. ಬಿಜೆಪಿಗೆ ಠಕ್ಕರ್ ಕೊಡಲು ಸಿದ್ದವಾಗಿರುವ ಕಾಂಗ್ರೆಸ್ 12ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುರ್ಚಿಗೆ ಕಂಟಕ ತರಲು ಸಜ್ಜಾಗಿದೆ.

ಇದರ ನಡುವೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಉಪಕದನದಲ್ಲಿ ತಕ್ಕ ಶಾಸ್ತಿ ನೀಡಲು ಜೆಡಿಎಸ್ ಕೂಡ ಸದ್ದಿಲ್ಲದೆ ರಣತಂತ್ರ ರೂಪಿಸುತ್ತಿದೆ. ಹೀಗೆ ಕಣದಲ್ಲಿರುವ ಮೂರು ರಾಜಕೀಯ ಪಕ್ಷಗಳು ಉಪಚುನಾವಣೆಯನ್ನು ಗೆಲ್ಲಲು ತಮ್ಮದೇ ಆದ ಕಾರ್ಯತಂತ್ರದಲ್ಲಿ ಮಗ್ನವಾಗಿವೆ.

ಇನ್ನೇನು ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿಯಿದ್ದು, ಬಹುತೇಕ ಮುಂದಿನ ವಾರದಿಂದ ಸಮರ ಕಲಿಗಳು ಮತಬೇಟೆಗಾಗಿ ಪ್ರಚಾರಕ್ಕೆ ಧುಮುಕಲಿವೆ.

ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿರುವ ಮಾಜಿ ಶಾಸಕರಿಗೆ ಬಿಜೆಪಿ ಮಣೆ ಹಾಕಿದೆ. ಇದಕ್ಕೆ ಕೆಂಡಕಾರಿರುವ ಕಾಂಗ್ರೆಸ್ ಅನರ್ಹತೆಯ ಅಸ್ತ್ರವನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕೆಂಬ ಲೆಕ್ಕಾಚಾರದಲ್ಲಿದೆ.

ತಮ್ಮ ಸರ್ಕಾರದ ಪತನಕ್ಕೆ ಕಾರಣವಾದ 15 ಜನರನ್ನೂ ಸೋಲಿಸುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೇ ಶಪಥ ಮಾಡಿದ್ದರು.

2018ರ ವಿಧಾನಸಭೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಎಷ್ಟು ಮತದಿಂದ ಜಯಶೀಲರಾಗಿದ್ದರು, ಉಳಿದವರು ಎಷ್ಟು ಮತಗಳ ಅಂತರದಿಂದ ಪರಾಭವಗೊಂಡಿದ್ದರೂ ಎಂಬುದರ ಸಿಂಹಾವಲೋಕನ ಈ ಕೆಳಂಕಂಡಂತಿದೆ.

ಕೇತ್ರ ಪಕ್ಷ-ಅಭ್ಯರ್ಥಿ ಪಡೆದ ಮತ ಅಂತರ
ಗೋಕಾಕ್ ಕಾಂಗ್ರೆಸ್-ರಮೇಶ್ ಜಾರಕಿಹೊಳಿ90,249
ಬಿಜೆಪಿ- ಅಶೋಕ್ ಪೂಜಾರಿ75,96914,280
ಅಥಣಿ ಕಾಂಗ್ರೆಸ್-ಮಹೇಶ್ ಕುಮಟಳ್ಳಿ82,094
ಬಿಜೆಪಿ- ಲಕ್ಷ್ಮಣ್ ಸವದಿ797632331
ಕಾಗವಾಡಕಾಂಗ್ರೆಸ್-ಶ್ರೀಮಂತ ಪಾಟೀಲ್80,060
ಬಿಜೆಪಿ -ರಾಜು ಕಾಗೆ 5011823942
ಮಸ್ಕಿಕಾಂಗ್ರೆಸ್- ಪ್ರತಾಪ್‍ಗೌಡ ಪಾಟೀಲ್60387
ಬಿಜೆಪಿ – ಬಸನಗೌಡ ತುರುವಿಹಾಳ್60174213
ಯಲ್ಲಾಪುರಕಾಂಗ್ರೆಸ್-ಶಿವರಾಮ್ ಹೆಬ್ಬಾರ್60290
ಬಿಜೆಪಿ -ಶಿವನಗೌಡ ಪಾಟೀಲ್64,8071483
ಹಿರೇಕೆರೂರುಕಾಂಗ್ರೆಸ್-ಬಿ.ಸಿ.ಪಾಟೀಲ್72,461
ಬಿಜೆಪಿ -ಯು.ಬಿ.ಬಣಕಾರ್71906555
ರಾಣೆಬೆನ್ನೂರುಕೆಪಿಜೆಪಿ- ಆರ್.ಶಂಕರ್63,910
ಕಾಂಗ್ರೆಸ್- ಕೆ.ಬಿ.ಕೋಳಿವಾಡ59,5724338
ವಿಜಯನಗರಕಾಂಗ್ರೆಸ್- ಆನಂದ್ ಸಿಂಗ್83,214
ಬಿಜೆಪಿ-ಎಚ್.ಆರ್.ಗವಿಯಪ್ಪ74,9868228
ಚಿಕ್ಕಬಳ್ಳಾಪುರಕಾಂಗ್ರೆಸ್-ಡಾ.ಕೆ.ಸುಧಾಕರ್76,240
ಜೆಡಿಎಸ್-ಕೆ.ಪಿ.ಬಚ್ಚೇಗೌಡ5157530,341
ಕೆ.ಆರ್.ಪುರಂಕಾಂಗ್ರೆಸ್-ಭೆರತಿ ಬಸವರಾಜ್1,35,404
ಬಿಜೆಪಿ-ನಂದೀಶ್ ರೆಡ್ಡಿ1,02,67532,729
ಮಹಾಲಕ್ಷ್ಮಿಲೇಔಟ್‍ಜೆಡಿಎಸ್-ಕೆ.ಗೋಪಾಲಯ್ಯ88,218
ಬಿಜೆಪಿ- ನರೇಂದ್ರ ಬಾಬು47,11841,100
ಯಶವಂತಪುರಕಾಂಗ್ರೆಸ್-ಎಸ್.ಟಿ.ಸೋಮಶೇಖರ್1,15,273
ಜೆಡಿಎಸ್-ಟಿ.ಎನ್.ಜವರಾಯಿಗೌಡ1,04,56210,711
ಶಿವಾಜಿನಗರಕಾಂಗ್ರೆಸ್-ರೋಷನ್ ಬೇಗ್59,742
ಬಿಜೆಪಿ-ಕಟ್ಟಾಸುಬ್ರಹ್ಮಣ್ಯ ನಾಯ್ಡು44,70215,040
ಕೆ.ಆರ್.ಪೇಟೆಜೆಡಿಎಸ್-ನಾರಾಯಣಗೌಡ88,016
ಕಾಂಗ್ರೆಸ್-ಕೆ.ಬಿ.ಚಂದ್ರಶೇಖರ್77,89717,119
ಹುಣಸೂರುಜೆಡಿಎಸ್-ಎಚ್.ವಿಶ್ವನಾಥ್91,667
ಕಾಂಗ್ರೆಸ್-ಎಚ್.ಪಿ.ಮಂಜುನಾಥ್83,0928,575
ಹೊಸಕೋಟೆಕಾಂಗ್ರೆಸ್- ಎಂಟಿಬಿ ನಾಗರಾಜ್98,824
ಬಿಜೆಪಿ- ಶರತ್ ಬಚ್ಚೇಗೌಡ91,2277,597

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ