ಬೆಂಗಳೂರು : ಇಂದು ಪಕ್ಷಕ್ಕೆ ಸೇರ್ಪಡೆಯಾದ ಅನರ್ಹ ಶಾಸಕ ಎಂಟಿಬಿ ನಾಗಾರಾಜ್ಗೆ ಬಿಜೆಪಿ ಟಿಕೆಟ್ ನೀಡಲು ತೀರ್ಮಾನಿಸಿರುವ ಹಿನ್ನೆಲೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಸಾವಿರಾರು ಜನ ಕಾರ್ಯಕರ್ತರ ಅಬ್ಬರದ ನಡುವೆ ಇಂದು ಸ್ವಾಭಿಮಾನಿ ಹೆಸರಲ್ಲಿ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ.
ಕ್ಷೇತ್ರದಲ್ಲಿ ತಮ್ಮ ಎದುರಾಳಿಯಾಗಿರುವ ಎಂಟಿಬಿ ನಾಗರಾಜ್ಗೆ ಪಕ್ಷ ಟಿಕೆಟ್ ನೀಡುತ್ತಿರುವುದರ ವಿರುದ್ಧ ಅಸಮಾಧಾನಗೊಂಡಿದ್ದ ಶರತ್, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಎಚ್ಚರಿಸಿದರು. ಇನ್ನು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಾಮಪತ್ರ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇಂದು ಎಂಟಿಬಿ ಬಿಜೆಪಿಗೆ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡನೆಯಾದ ಹಿನ್ನೆಲೆ ಅವರು ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಶರತ್ ಬಚ್ಚೇಗೌಡಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆಗೆ ಮುನ್ನ ಅವರು ಹೊಸಕೋಟೆ ಅವಿಮುಕ್ತೇಶ್ವರ ದೇವಸ್ಥಾನ, ದರ್ಗಾದಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.
ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ
ಎಂಟಿಬಿ ಹಾಗೂ ಶರತ್ ಬಚ್ಚೇಗೌಡ ಅವರಿಗೆ ಪ್ರತಿಷ್ಠೆಯ ಕದನವಾಗಿರುವ ಹೊಸಕೋಟೆ ಕ್ಷೇತ್ರ ಜಿದ್ದಾಜಿದ್ದಿ ಕಣವಾಗಿ ರೂಪುಗೊಂಡಿದೆ. ಬಿಜೆಪಿ ವಿರುದ್ಧ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಶರತ್ ಬಚ್ಚೇಗೌಡ ಈಗಾಗಲೇ ಸ್ವಾಭಿಮಾನಿ ಹೆಸರಿನಲ್ಲಿ ಕಣಕ್ಕೆ ಇಳಿದಿದ್ದು, ಬೃಹತ್ ಬೆಂಬಲಿಗರ ಮೆರವಣಿಗೆಯೊಂದಿಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.