ನ್ಯೂಯಾರ್ಕ್, ನ.12- ಬಾಲಿವುಡ್ನ ಅತ್ಯಂತ ಸ್ಫುರದ್ರೂಪಿ ಸಿಕ್ಸ್ ಪ್ಯಾಕ್ ಸ್ಟಾರ್ ನಟ ಹೃತಿಕ್ ರೋಷನ್ಗೆ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಗೃಹಿಣಿಯೊಬ್ಬರಿಗೆ ಗ್ರೀಕ್ ಗಾಡ್ಖ್ಯಾತಿಯ ಹೃತಿಕ್ ಮೇಲೆ ಮೋಹವಾಗಿತ್ತು. ಆಕೆಯ ವ್ಯಾಮೋಹದಿಂದ ಕೋಪಗೊಂಡಿದ್ದ ಪತಿ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ ಸೂಪರ್ ಸ್ಟಾರ್ ಮೇಲೆ ಆಕೆಯ ಕ್ರಷ್ ಮಿತಿ ಮೀರಿದ್ದರಿಂದ ಕುಪಿತಗೊಂಡು ಪತಿ ಆಕೆಯನ್ನು ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನ್ಯೂಯಾರ್ಕ್ ನಗರದ ಕ್ವೀನ್ಸ್ ಪ್ರಾಂತ್ಯದ ಜೆಮಿನಿ ಅಲ್ಟ್ರಾ ಲಾಂಜ್ ಬಾರ್ನಲ್ಲಿ ಭಾರತ ಮೂಲದ ಮಹಿಳೆ ಡೋನೆ ದೊಜೋಯ್ (27) ಕೆಲಸ ಮಾಡುತ್ತಿದ್ದರು. ಅಲ್ಲೇ ನೆಲೆಸಿರುವ ದಿನೇಶ್ವರ ಬುದ್ಧಿ ದತ್ತ್ ಎಂಬಾತ ಡೋನೆಯನ್ನು ಪ್ರೀತಿಸಿ ಮದುವೆಯಾಗಿದ್ದ.
ಪತ್ನಿಗೆ ನಟನ ಮೇಲೆ ಮೊದಲಿನಿಂದಲೂ ವಿಪರೀತ ವ್ಯಾಮೋಹವಿತ್ತು. ಅದು ಮದುವೆಯಾದ ನಂತರವೂ ಮುಂದುವರೆದಿತ್ತು. ಇದರಿಂದ ಕೋಪಗೊಂಡ ದಿನೇಶ್ವರ್ ಆಕೆಯನ್ನು ಹತ್ಯೆ ಮಾಡಿದ್ದಾನೆ.
ಹೃತಿಕ್ ರೋಷನ್ ಅಭಿನಯದ ಕಹೋ ನ ಪ್ಯಾರ್ ಹೈ ಚಿತ್ರವನ್ನು ನೋಡಿದ ಮೇಲೆ ಡೋನೆಗೆ ಹೃತಿಕ್ ಮೇಲೆ ವ್ಯಾಮೋಹವಾಗಿತ್ತು. ಸದಾ ಹೃತಿಕ್ ಬಗ್ಗೆ ಪತ್ನಿ ಮಾತನಾಡುತ್ತಿದ್ದರಿಂದ ಜೊತೆಗೆ ಹೃತಿಕ್ ರೋಷನ್ ಚಿತ್ರಗಳನ್ನು ಅತಿಯಾಗಿ ನೋಡುತ್ತಿದ್ದರಿಂದ ದಿನೇಶ್ವರ್ ಸಹನೆ ಕಳೆದುಕೊಳ್ಳುತ್ತಿದ್ದ.
ಕೊಲೆಗೂ ಮುನ್ನ ದಿನೇಶ್ವರ್ ಡೋನೆಯನ್ನು ಸಿನಿಮಾಗೆ ಕರೆದೊಯ್ದಿದ್ದ. ನಂತರ ತಮ್ಮ ಅಪಾರ್ಟ್ ಮೆಂಟ್ಗೆ ಮರಳಿದ ಬಳಿಕ ದಿನೇಶ್ವರ್ ಡೋನೆಯನ್ನು ಹತ್ಯೆ ಮಾಡಿ ನಂತರ ಆತ ಹೊವಾರ್ಡ್ ಬೀಚ್ನ ಹತ್ತಿರದ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.