ಬೆಂಗಳೂರು: ಶಾಸಕರ ಅನರ್ಹತೆಯಿಂದ ತೆರವಾದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದ್ದು ಸೋಮವಾರ( ನ. 11) ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಉಪಚುನಾವಣೆಯ ಕುರಿತಾಗಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಡಿಸೆಂಬರ್ 5 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಾದ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.
ಉಪಚುನಾವಣೆಗೆ ನವೆಂಬರ್ 11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಈ ಹಿಂದೆ ಕೂಡ ನಾಮಪತ್ರ ಸಲ್ಲಿಕೆ ಆಗಿರುವುದನ್ನು ಪರಿಗಣಿಸಲಾಗುತ್ತದೆ. ನೆವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ನಾಮಪತ್ರ ವಾಪಸ್ ಪಡೆಯಲು ನೆವೆಂಬರ್ 21 ಕೊನೆಯ ದಿನಾಂಕವಾಗಿದೆ.
ನಾಮಪತ್ರ ಸಲ್ಲಿಕೆ ಆರಂಭ : 11-11-2019
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ : 18-11-2019
ನಾಮಪತ್ರ ಪರಿಶೀಲನೆ : 19-11-2019
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ: 21-11-2019
ಮತದಾನ ನಡೆಯುವ ದಿನ : 05-12-2019
ಫಲಿತಾಂಶ ಪ್ರಕಟ : 09-12-2019
15 ಮತ ಕ್ಷೇತ್ರಗಳಲ್ಲಿ ಒಟ್ಟು ಮತಗಟ್ಟೆಗಳು: 4185
ಒಟ್ಟು ಚುನಾವಣೆ ಸಿಬ್ಬಂದಿ: 22598
15 ಕ್ಷೇತ್ರಗಳಲ್ಲಿ ಒಟ್ಟು ಮತದಾರರು: 37,50565
ಪುರುಷ ಮತದಾರ ಸಂಖ್ಯೆ: 19,1791
ಮಹಿಳಾ ಮತದಾರರ ಸಂಖ್ಯೆ: 18,37375
ಇತರೆ: 399