ಬೆಂಗಳೂರು : ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ನಿನ್ನೆ ರಾತ್ರಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲವೊತ್ತು ಧಾರಕಾರ ಗುಡುಗು ಮಿಂಚು, ಗಾಳಿ ಸಹಿತ ಮಳೆಯಾಗಿದೆ.
ರಾತ್ರಿ 8.30ಕ್ಕೆ ಒಂದು ಗಂಟೆ ಸುರಿದ ಮಳೆಯ ಆರ್ಭಟಕ್ಕೆ ಇಡೀ ನಗರ ತತ್ತರಿಸಿ ಹೋಯ್ತು. ನಗರದ ಪ್ರಮುಕ ಬೀದಿಗಳು ಹೊಳೆಯಾಗಿ ಹರಿಯಿತು. ಮ್ಯಾನ್ ಹೋಲ್, ಹಾಗೂ ಚರಂಡಿಗಳು ರಸ್ತಗೆ ಸುರಿಯುತ್ತಿದ್ದ ದೃಶ್ಯಗಳು ಕಂಡು ಬಂತು. ವಿವಿಧ ಅಂಡರ್ ಪಾಸ್ ಹಲವಡೆ ಮಳೆ ನೀರು ನಿಂತಿದ್ದು ವಾಹನ ಸವಾರರಿಗೆ ತೊಂದರೆಯಾಯಿತು.
ಶೇಷಾದ್ರಿಂಪುರಂನ ಪೈಪ್ ಲೈನ್ ರೋಡ್ ನಲ್ಲಿ ಮಳೆ ನೀರು ನಿಂತು ಇಲ್ಲಿನ ಜನರು ದೊಡ್ಡ ಪಜೀತಿಯನ್ನೆ ಎದುರಿಸಬೇಕಾಯಿತು.