ಬೆಂಗಳೂರು, ನ.8-ಟೋಟಲ್ ಸ್ಟೇಷನ್ ಸರ್ವೆ ಮೂಲಕ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.
ಪಾಲಿಕೆ ಸಭೆಯಲ್ಲಿ ಸದಸ್ಯರು ಮಾಡಿದ ಆರೋಪಗಳಿಗೆ ಉತ್ತರಿಸಿದ ಅವರು, ಎಂಟು ಸ್ವತ್ತುಗಳ ತೆರಿಗೆ ರಿಯಾಯಿತಿಯಲ್ಲಿ ಲೋಪವಾಗಿದೆ. ಅವರು ಮಾಡಿರೋ ಆದೇಶದಲ್ಲಿ ತಪ್ಪಾಗಿದ್ದು, ಶಿಕ್ಷೆ ಕೊಡಲೇಬೇಕಿದೆ ಎಂದು ಹೇಳಿದರು.
ಬೇರೆ ವಲಯಗಳಲ್ಲೂ ಇಂತದ್ದೇ ಪ್ರಕರಣಗಳು ನಡೆದಿದ್ದು, ಇದರ ತನಿಖೆಗೆ ತಂಡ ರಚಿಸಲಾಗಿದೆ. ವ್ಯವಸ್ಥೆಯನ್ನು ಮತ್ತಷ್ಟು ಬಿಗಿಮಾಡಿ, ಪರಿಶೀಲನೆ ಮಾಡಬೇಕಿದೆ. ಸರಿಯಾಗಿ ಸರ್ವೆ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬೇಕಿದೆ. ಅಧಿಕಾರಿಗಳು ಹಾಗೂ ಸದಸ್ಯರ ಸಮಿತಿ ಮಾಡಿ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.