ಬೆOಗಳೂರು, ನ ೪-ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಸಭೆಯಲ್ಲಿ ಹೇಳಿರುವ ಮಾತುಗಳನ್ನು ಸಾಕ್ಷö್ಯಗಳೆಂದು ಪರಿಗಣಿಸಲು ಸಹಮತ ವ್ಯಕ್ತಪಡಿಸುವ ಮೂಲಕ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಗೆ ಮಹತ್ವದ ತಿರುವು ನೀಡಿದೆ.
ಅನರ್ಹ ಶಾಸಕರ ಪ್ರಕರಣ ಕುರಿತಂತೆ ಈಗಾಗಲೇ ವಾದ-ವಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಇಂದು ಬೆಳಿಗ್ಗೆ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದೆ ಹಾಜರಾದ ಕಾಂಗ್ರೆಸ್ ಪರವಾದ ವಕೀಲರಾದ ಕಪಿಲ್ ಸಿಬಲ್ ಅವರು ಅನರ್ಹ ಶಾಸಕರ ಪಕ್ಷಾಂತರ ಕುರಿತಂತೆ ತಮಗೆ ಪ್ರಬಲ ಸಾಕ್ಷö್ಯ ಸಿಕ್ಕಿದೆ.ಅದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಈಗಾಗಲೇ ಪ್ರಕರಣದ ವಿಚಾರಣೆ ಮುಗಿದಿದೆ.ತೀರ್ಪು ಕಾಯ್ದಿರಿಸಲಾಗಿದೆ. ಈ ಹಂತದಲ್ಲಿ ಮತ್ತೊಮ್ಮೆ ಸಾಕ್ಷö್ಯವನ್ನು ಹಾಜರು ಪಡಿಸುವುದಾಗಿ ಹೇಳುತ್ತಿದ್ದೀರಿ.ಹಿರಿಯ ವಕೀಲರಾದ ನಿಮಗೆ ನ್ಯಾಯಾಲಯದ ಕಲಾಪಗಳ ಬಗ್ಗೆ ಚೆನ್ನಾಗಿ ಮಾಹಿತಿ ಎಂದು ಭಾವಿಸಿದ್ದೇವೆ. ಈ ಹಂತದಲ್ಲಿ ಹೊಸ ಸಾಕ್ಷö್ಯವನ್ನು ಪರಿಗಣಿಸಲು ಸಾಧ್ಯವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ವಾದ-ವಿವಾದ ಪೂರ್ಣಗೊಂಡು ತೀರ್ಪು ಕಾಯ್ದಿರಿಸಿದ ನಂತರ ಹಲವಾರು ರೀತಿಯ ಬೆಳವಣಿಗೆಗಳಾಗಿವೆ. ಶಾಸಕರ ರಾಜೀನಾಮೆ ಹಿಂದೆ ಬೇರೆ ರೀತಿಯ ಉದ್ದೇಶವಿರುವುದಕ್ಕೆ ನಮಗೆ ಬಲವಾದ ಸಾಕ್ಷö್ಯ ಸಿಕ್ಕಿದೆ ಎಂದು ವಾದಿಸಿದರು.
ಇದಕ್ಕೆ ಕೊನೆಗೆ ಸಹಮತ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುತ್ತೇವೆ. ಅವರು ಒಪ್ಪಿದ್ದೇ ಆದರೆ ನಾಳೆಯೇ ಪ್ರತ್ಯೇಕ ಪೀಠ ರಚನೆಯಾಗಲಿದೆ.ಅಲ್ಲಿ ನೀವು ಹಾಜರುಪಡಿಸುವ ಸಾಕ್ಷö್ಯಗಳ ಬಗ್ಗೆ ಐದು ನಿಮಿಷಗಳ ಕಾಲ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಈ ನಡುವೆ ಅನರ್ಹ ಶಾಸಕರ ಪರವಾದ ವಕೀಲರು ವಾದ-ವಿವಾದ ಪೂರ್ಣಗೊಂಡಿರುವುದರಿAದ ಹೊಸ ಸಾಕ್ಷö್ಯ, ಪುರಾವೆಗಳನ್ನು ಪರಿಗಣಿಸಬಾರದು ಎಂದು ಅನರ್ಹ ಶಾಸಕರ ಪರವಾದ ವಕೀಲರು ಒತ್ತಾಯಿಸಿದರು.
ಈಗಾಗಲೇ ನಡೆದಿರುವ ವಾದ-ವಿವಾದ ಆಧರಿಸಿಯೇ ತೀರ್ಪು ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
ನಾಳೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಸಂಬAಧದ ಸಾಕ್ಷö್ಯ ಪರಿಗಣಿಸಲು ಸಮ್ಮತಿ ಸೂಚಿಸಿರುವುದರಿಂದ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ. ಈಗಾಗಲೇ ೧೫ ಕ್ಷೇತ್ರಗಳಲ್ಲಿ ಚುನಾವಣೆಗೆ ಸಜ್ಜಾಗುತ್ತಿದ್ದ ಅನರ್ಹ ಶಾಸಕರು ಬಿಜೆಪಿಗೆ ಇದರಿಂದ ಹೊಸ ಟ್ರಬಲ್ ಎದುರಾಗುವ ಸಾಧ್ಯತೆ ಇದೆ.
ನಾಳೆ ಸುಪ್ರೀಂಕೋರ್ಟ್ನಲ್ಲಿ ಯಾವ ರೀತಿ ವಿಚಾರಣೆ ನಡೆಯಲಿದೆ, ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದರ ಮೇಲೆ ನಿರ್ಧಾರವಾಗಲಿದೆ.