ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿ ಹೊಗೆಯಲ್ಲಿ ಮುಳುಗಿದ್ದು ದಿನದಿಂದ ದಿನಕ್ಕೆ ಜನಜೀವನ ಮತ್ತಷ್ಟು ಹದಗಟ್ಟಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಉಂಟಾಗಿತ್ತು.
ದೀಪಾವಳಿ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಇನ್ನಷ್ಟು ಹೆಚ್ಚಿದೆ. ಶಾಲಾ ಕಾಲೇಜುಗಳಿಗೆ ಸೆಪ್ಟಂಬರ್ 5ರವರೆಗೆ ರಜೆ ಘೋಷಿಸಲಾಗಿದೆ. ಕಟ್ಟಡ ಕಾಮಗಾರಿಗಳನ್ನ ಸ್ಥಗಿತಗೊಳಿಸಲಾಗಿದೆ. ಏರ್ ಇಂಡೆಕ್ಸ್ 500 ಅಂಕಗಳನ್ನ ದಾಟಿದ್ದು ಇದು ಆತಂಕವನ್ನ ಹೆಚ್ಚಿಸಿದೆ.
ನಾಳೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾರತ ಬಾಂಗ್ಲಾದೇಶ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದ್ದು ಪಂದ್ಯಕ್ಕೆ ವಾಯು ಮಾಲಿನ್ಯ ಅಡ್ಡಿಮಾಡಲಿದೆ. ಪಂದ್ಯ ಆಡಲು ಆಗದಿದ್ದರೂ ಬಿಸಿಸಿಐ ಬಿಗ್ ಬಾಸ್ ಗಳು ಪಂದ್ಯ ನಡೆಸಲು ಪಣ ತೊಟ್ಟಿದ್ದಾರೆ.