ಬೆಂಗಳೂರು, ನ.1- ನಾಡಿನ ಸಮಸ್ತ ಕನ್ನಡಿಗರಿಗೆ 64ನೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರಿದ್ದಾರೆ.
ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ ಗೌಡರು, ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಗಳಿಗೂ ಹೆಚ್ಚಿದೆ. ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ಗಂಗರು, ವಿಜಯನಗರದ ಅರಸರ ಆಳ್ವಿಕೆಯ ವೈಭವೋಪೇತವಾದ ಇತಿಹಾಸ ಹೊಂದಿರುವ ಭವ್ಯ ನಾಡು ನಮ್ಮದು.ಈ ಮೂಲಕ ಹಲವು ಮಹನೀಯರ ಹೋರಾಟವನ್ನು ಸಾರ್ಥಕಗೊಳಿಸುವ ಸದವಕಾಶ ನನ್ನ ಪಾಲಿಗೆ ಬಂದಿತ್ತು ಎಂದು ದೇವೇಗೌಡರು ತಿಳಿಸಿದ್ದಾರೆ.
ಭಾಷೆ ಆಧಾರದ ಮೇಲೆ ನಮ್ಮದೊಂದು ನಾಡು ಕಟ್ಟಿಕೊಂಡ ದಿನವಿದು ಎಂದು ಎಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಕನ್ನಡಿಗರನ್ನು ಬೆಸೆದ ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ.ನಮ್ಮ ಹೆಗ್ಗುರುತು.ಕನ್ನಡ ನಾಡಿನ ರಚನೆಗೆ ಶ್ರಮಿಸಿದ ಎಲ್ಲರನ್ನೂ ನೆನೆಯುತ್ತೇನೆ. ಕನ್ನಡ ಹೋರಾಟಗಾರರನ್ನು ಸ್ಮರಿಸುತ್ತೇನೆ. ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವ ಕೋರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.