
ಬೆಂಗಳೂರು, ಅ.31-ಟಿಪ್ಪು ಸುಲ್ತಾನ್ ನಮಗೇನು ಕೊಡುಗೆ ನೀಡಿದ್ದಾರೆ ಎನ್ನುವುದರ ಜತೆಗೆ ಸಮಾಜಕ್ಕೆ ಅವರಿಂದ ಏನು ತೊಂದರೆಯಾಗಿದೆ ಎಂಬುದನ್ನು ತಿಳಿಯಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ದಿಕ್ಕು ತಪ್ಪಿಸದಿರಲು ಇಂತಹ ವಿಚಾರಗಳನ್ನು ತಿಳಿಸಿಕೊಡಬೇಕು.ಟಿಪ್ಪು ಒಳ್ಳೆಯ ಸೈನಿಕ ಇರಬಹುದು. ಆದರೆ, ಸಂಸ್ಕøತಿ ಮತ್ತು ನಾಡಿಗೆ ತೊಂದರೆ ಕೊಟ್ಟಿದ್ದಾರೆ.ಈ ವಿಚಾರದಲ್ಲಿ ಮತಬ್ಯಾಂಕ್ ರಾಜಕಾರಣ ಬಿಡಬೇಕು ಎಂದು ತಿರುಗೇಟು ನೀಡಿದರು.