ಬೆಂಗಳೂರು : ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು ಅರ್ಧ ರಾಜ್ಯ ಪ್ರವಾಹದಲ್ಲಿ ಸಿಲುಕಿದೆ.
ನಿರಂತರ ಮಳೆ ಸುರಿದ ಹಿನ್ನಲೆಯಲ್ಲಿ ಮೈಸೂರು ನಂದಿ ಬೆಟ್ಟದಲ್ಲಿ ಕುಸಿತ ಕಂಡು ಬಂದಿದ್ದು ರಸ್ತೆಯನ್ನ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಂದಿ ಬೆಟ್ಟದ ಬಳಿ ರಸ್ತೆ ಕುಸಿತ ಸಂಭವಿಸಿದೆ.
ಪೊಲೀಸರು ರಸ್ತೆಗೆ ಬ್ಯಾರಿಕೆಡ್ ಗಳನ್ನ ಪೊಲೀಸರು ಅಳವಡಿಸಿದ್ದಾರೆ. ನಂದಿ ಇರುವ ಮಾರ್ಗಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದೆ.ಇನ್ನು ಗಡಿನಾಡು ಚಾಮರಾಜನಗರದ ಮಲೆಮಹದೇಶ್ವರ ಹಾಗೂ ಪಾಲರ್ ಮಾರ್ಗದಲ್ಲಿ ಬೆಟ್ಟ ಕುಸಿತ ಕಂಡು ಬಂದಿದೆ.
ಅಪಾಯ ಮಟ್ಟ ಮೀರಿ ಹರಿಯುತ್ತಿದೆ ತುಂಗಭದ್ರೆ
ಉತ್ತರ ಕರ್ನಾಟಕದ ಪ್ರಮುಖ ನದಿ ಮಲ್ಲಾಪ್ರಭ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಸುತ್ತಮುತ್ತಲಿನ ಗ್ರಾಮ ಜಲಾವೃಗೊಂಡಿದೆ.
ಇನ್ನುತುಂಗಭದ್ರೆ ಜಲಾಶಯ ಭರ್ತಿಯಾಗಿದ್ದು ಅಪಾಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತುಂಗಭದ್ರಯಿಂದ 1.85 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಕೊಪ್ಪರ ಗ್ರಾಮದ ಸರಸಿಂಹ ದೇವಸ್ಥಾನ ಜಲದಿಗ್ಬಂಧನಕ್ಕೆ ಗುರಿಯಾಗಿದೆ. ಸಿಂಧನೂರು, ಮಾನ್ವಿ ಗ್ರಾಮದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆ ಯಾಗಿದೆ. ಇನ್ನು ಹಂಪಿಯಲ್ಲಿ ಸ್ಮರಕಗಳು ನೀರಿನಲ್ಲಿ ಮುಳುಗಿವೆ. ಬಾಗಲಕೋಟೆ ಜಿಲ್ಲೆಯ ಹುನುಗುಂದ ತಾಲ್ಲೂಕಿನ ಕೂಡಲಸಂಗಮ ಗ್ರಾಮದಲ್ಲಿ ಮನೆಗಳಿಗೆ ನೀರುನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಸುರಿದಿದೆ. ಉಜ್ಜಿನಿ ಮತ್ತು ಬಿದಿರೆಯಲ್ಲಿ ಗದ್ದೆಗಳು ನಾಶವಾಗಿವೆ.