
ಬೆಳಗಾವಿ: ಭಾರೀ ಮಳೆಗೆ ತುತ್ತಾಗಿರುವ ಬೆಳಗಾವಿಯ ಗೋಕಾಕ್್ನಲ್ಲಿ ಭೂಕುಸಿತ ಸಂಭವಿಸಿ ಬಂಡೆಗಳು ಜಾರುತ್ತಿವೆ.ಸ್ಥಳಕ್ಕೆ ಪುಣೆಯ ಎನ್ ಡಿಆರ್ ಎಫ್ ರಕ್ಷಣಾ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ದೊಡ್ಡ ಗಾತ್ರ ಬಂಡೆಗಳು ನೆಲಕುರುಳುತ್ತಿರುವ ಹಿನ್ನೆಲೆಯಲ್ಲಿ ಬಂಡೆಗಳನ್ನ ಸ್ಫೋಟಿಸಲು ಎನ್ ಡಿಆರ್ ಎಫ್ ಮುಂದಾಗಿದೆ.
ಪ್ರಚಾರ ಗಿಟ್ಟಿಸಿಕೊಳ್ತಿದ್ದಾರಾ ಸತೀಶ್ ಜಾರಕಿಹೊಳಿ ?
ಬಂಡೆ ಕಾರ್ಯಾಚರಣೆ ಮಾಡಲು ಮಾಜಿ ಶಾಸಕ ಸತೀಶ್ ಜಾರಕಿ ಹೊಳಿ ಎನ್ ಡಿಆರ್ ಎಫ್ ತಂಡ ಮತ್ತು ಹಿಟಾಚಿಯನ್ನ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಾಚರಣೆ ಮಾಡುತ್ತಿರುವ ಹಿಟಾಚಿ ವಾಹನದಲ್ಲಿ ಸತೀಶ್ ಜಾರಕಿಹೊಳಿ ಅವರ ಫೋಟೋ ಹಾಕಲಾಗಿದೆ. ಇದು ಮುಂಬರುವ ಚುನಾವಣೆಯ ಪ್ರಚಾರದ ಗಿಮಿಕ್ ಎಂಬ ಟೀಕೆಗಳು ಕೇಳಿ ಬಂದಿವೆ. ಆದರೆ ಇದನ್ನ ಸತೀಶ್ ಜಾರಕಿ ಹೊಳಿ ಫೌಂಡೇಶನ್ ಈ ಆರೋಪವನ್ನ ನಿರಾಕರಿಸಿದೆ.