ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿ ಅಬ್ದುಲ್ ವಾಜೀದ್

ಬೆಂಗಳೂರು,ಅ.22- ಬಿಬಿಎಂಪಿ  ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಅಬ್ದುಲ್ ವಾಜೀದ್ ನಿಯೋಜನೆಗೊಂಡಿದ್ದಾರೆ.

ಗಂಗಾಂಬಿಕೆ ಮೇಯರ್ ಆಗಿದ್ದ ಸಮಯದಲ್ಲಿ ವಾಜೀದ್ ಅವರು ಆಡಳಿತ ಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆದರೆ ಪ್ರಸಕ್ತ ಸಾಲಿನ ಕೊನೆ ಮೇಯರ್ ಸ್ಥಾನ ಬಿಜೆಪಿಗೆ ಒಲಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‍ಗೆ ಪ್ರತಿಪಕ್ಷದ ಸ್ಥಾನ ಲಭಿಸಿತ್ತು.

ಹೀಗಾಗಿ ಆಡಳಿತ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಅವರನ್ನೆ ಪ್ರತಿಪಕ್ಷದ ನಾಯಕರನ್ನಾಗಿ  ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶ ಹೊರಡಿಸಿದ್ದಾರೆ.

ಗಂಗಾಂಬಿಕೆ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ  ಪದ್ಮನಾಭ ರೆಡ್ಡಿ ಅವರು ಮೇಯರ್ ಸ್ಥಾನಕ್ಕಾಗಿ ಭಾರೀ ಪೈಪೆÇೀಟಿ ನೀಡಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಗೌತಮ್‍ಕುಮಾರ್ ಅವರು ಮೇಯರ್ ಆಗಿ  ಆಯ್ಕೆಯಾಗಿದ್ದರು.

ಇದೀಗ ಆಡಳಿತ ಪಕ್ಷದ ನಾಯಕನ ಸ್ಥಾನ ಖಾಲಿಯಿದ್ದು, ಬಿಜೆಪಿ ಇದುವರೆಗೂ ಆಡಳಿತ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ತಿಂಗಳಾಂತ್ಯದೊಳಗೆ ಪಾಲಿಕೆಯ ಮಾಸಿಕ ಸಭೆ ನಡೆಯಬೇಕಿದ್ದು, ಆ ವೇಳೆಗೆ ಆಡಳಿತ ಪಕ್ಷದ ನಾಯಕನ ಆಯ್ಕೆಯಾಗುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ