![Ramalinga-Reddy](http://kannada.vartamitra.com/wp-content/uploads/2019/06/Ramalinga-Reddy-572x381.jpg)
ಬೆಂಗಳೂರು,ಅ.21- ಬಿಟಿಎಂ ಲೇಔಟ್ ಹಾಗೂ ಜಯನಗರ ವಿಧಾನಸಭಾ ವ್ಯಾಪ್ತಿಯ ಕೆಲವು ಪ್ರಮುಖ ರಸ್ತೆಗಳಲ್ಲಿನ ಮೆಟ್ರೊ ಕಾಮಗಾರಿ ಹಿನ್ನೆಲೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಕೂಡಲೇ ಡಾಂಬರೀಕರಣ ಮಾಡಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶಾಸಕ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.
ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಜಯದೇವ ಆಸ್ಪತ್ರೆ ಜಂಕ್ಷನ್‍ವರೆಗೂ, ಜಿಡಿಮರದಿಂದ ಡೈರಿ ವೃತ್ತದವರೆಗೂ ಹಾಗೂ ಜಯದೇವ ಆಸ್ಪತ್ರೆಯಿಂದ ಆರ್‍ವಿ ರಸ್ತೆಯವರೆಗೂ ರಸ್ತೆ ಕಾಮಗಾರಿಯ ಅಗತ್ಯವಿದೆ.
ಇಲ್ಲಿನ ಅವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಇಲ್ಲಿರುವ ಪ್ರಮುಖ ಆಸ್ಪತ್ರೆಗಳಾದ ಜಯದೇವ, ಅಪೆÇಲೋ, ಪೆÇೀರ್ಟೀಸ್‍ಗಳಿಗೆ ಬರುವ ರೋಗಿಗಳು ಸೇರಿದಂತೆ ಉದ್ಯೋಗಿಗಳು, ಶಾಲಾಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗಿದೆ.ಇದನ್ನು ನಿವಾರಿಸಲು ಡಾಂಬರೀಕರಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳುವಂತೆ ತಿಳಿಸಿದ್ದಾರೆ.