ಇಂದಿರಾ ಗಾಂಧಿ ಸಾರ್ವಕರ್ ಅನುಯಾಯಿಯಾಗಿದ್ರು:ರಂಜೀತ್

ಮುಂಬೈ,ಅ.18- ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕೂಡ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅನುಯಾಯಿಯಾಗಿದ್ದರು ಎಂದು ಹೇಳುವ ಮೂಲಕ ಸಾರ್ವಕರ್‍ಗೆ ಭಾರತ ರತ್ನ ನೀಡಬೇಕೆಂಬುದನ್ನು ಅವರ ಮೊಮ್ಮಗ ರಂಜೀತ್ ಸಮರ್ಥಿಸಿಕೊಂಡಿದ್ದಾರೆ.
ಮಾಜಿ ಪ್ರದಾನಿ ಇಂದಿರಾ ಗಾಂಧಿ ವೀರ್ ಸಾವರ್ಕರ್ ಅವರನ್ನು ಗೌರವಿಸುತ್ತಿದ್ದರು. ಆದರೆ ಅವರ ಚಿಂತನೆಗಳು ಮತ್ತು ತತ್ವಗಳು ಜವಾಹರ್ ಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ಸಿದ್ದಾಂತಗಳಿಗೆ ವಿರುದ್ಧವಾಗಿದ್ದವು. ಇಂದಿರಾ ಗಾಂಧಿಯವರು ಸದೃಢ ರಾಷ್ಟ್ರ ನಿರ್ಮಾಣದ ಮಹತ್ವವನ್ನು ಪ್ರತಿಪಾದಿಸುತ್ತಿದ್ದ ಸಾರ್ವಕರ್ ಅವರ ಅನುಯಾಯಾಗಿದ್ದರಿಂದಲೇ ಪಾಕಿಸ್ತಾನ ಮಣಿಯುವಂತೆ ಮಾಡಿದ್ದರು ಅಲ್ಲದೆ ಸೈನ್ಯ ಮತ್ತು ವಿದೇಶಿ ಸಂಬಂಧಗಳನ್ನು ಬಲಪಡಿಸಿದರು, ಪರಮಾಣು ಪರೀಕ್ಷೆಗಳನ್ನು ಸಹ ಯಶಸ್ವಿಯಾಗಿ ನಡೆಸಿದ್ದರು ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
ಸಾರ್ವಕರ್‍ಗಿಂತ ಹೆಚ್ಚಿನ ಜಾತ್ಯಾತೀತ ಮನುಷ್ಯನನ್ನು ಕಾಣಲು ಸಾಧ್ಯವಿಲ್ಲ. ನೀವು ಅವರ ನಂಬಿಕೆಯನ್ನು ಅನುಸರಿಸಬೇಕು. ನಿಮ್ಮ ಮನೆಯಲ್ಲಿ ಧರ್ಮ ಪಾಲಿಸಿ. ನೀವು ಹಿಂದೂ ಅಲ್ಲ, ಮುಸ್ಲಿಂ ಅಲ್ಲ. ಮನೆಯಿಂದ ಹೊರಗಿದ್ದಾಗ ನೀವೊಬ್ಬ ಭಾರತೀಯ ಎಂಬುದನ್ನು ಅರಿತುಕೊಳ್ಳಿ ಎಂದು ಎಐಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಗೆ ತಿರುಗೇಟು ನೀಡಿದ್ದಾರೆ.
ಸಂಸತ್ ಪ್ರವೇಶಿಸುವ ಪ್ರತಿಯೊಬ್ಬರೂ ಜಾತಿ, ಧರ್ಮ, ಲಿಂಗ ಇತ್ಯಾದಿಗಳನ್ನು ಹೊರಗಿಡಬೇಕು ಎಂಬುದನ್ನು ಸಾರ್ವಕರ್ ಬಲವಾಗಿ ಪ್ರತಿಪಾದಿದ್ದರು ಎಂದು ರಂಜೀತ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಘಟಕ ಸಾರ್ವಕರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ