![congress-demonitisation](http://kannada.vartamitra.com/wp-content/uploads/2018/11/congress-demonitisation-673x381.jpg)
ಬೆಂಗಳೂರು,ಅ.18- ವಿವಿಧ ಅಕಾಡೆಮಿಗಳಿಗೆ ನೇಮಕಾತಿ ಮಾಡುವಾಗ ಸಾಮಾಜಿಕ ನ್ಯಾಯ ಹಾಗೂ ಭೌಗೋಳಿಕ ಪ್ರಾತಿನಿಧ್ಯವನ್ನು ಪಾಲಿಸದೆ ಸಂಘ ಪರಿವಾರದ ಹಿನ್ನೆಲೆಯುಳ್ಳವರಿಗೆ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ವಿವಿಧ ನೇಮಕಾತಿಗಳ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಅಕಾಡೆಮಿಗಳ ನೇಮಕಾತಿ ನೋಡಿದರೆ ಬಹುತೇಕರ ಆಯ್ಕೆ ಭಟ್ಟಂಗಿಗಳಿಗೆ ನೀಡಿದ ಸಮಾಧಾನಕರ ಬಹುಮಾನದಂತಿದೆ ಎಂದು ಲೇವಡಿ ಮಾಡಿದೆ.
ಜ್ಞಾನ, ಅನುಭವ, ಕೌಶಲ್ಯ, ಹಿರಿತನವನ್ನು ಕಡೆಗಣಿಸಿ ಸಂಘ ಪರಿವಾರದ ಹಿನ್ನೆಲೆಯನ್ನು ಮಾತ್ರ ಪರಿಗಣಿಸಿದಂತಿದೆ.ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ ಎಂದು ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.