ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಜೈಸ್ವಾಲ್

17 ವರ್ಷದ ಮುಂಬೈ ತಂಡದ ಯುವ ಬ್ಯಾಟ್ಸ್‍ಮನ್ ಯಶಸ್ವಿ ಜೈಸ್ವಾಲ್ ವಿಜಾಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಅತಿ ಕಿರಿಯ ಬ್ಯಾಟ್ಸ್‍ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಜಾರ್ಖಂಡ್ ವಿರುದ್ಧಧ ವಿಜಯ್ ಹಜಾರೆ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ದ್ವಿ ಶತಕ ಸಿಡಿಸಿ ಅಬ್ಬರಿಸಿದ್ರು. ಒಟ್ಟು 154 ಎಸೆತ ಎದುರಿಸಿದ ಜೈಸ್ವಾಲ್ 17 ಬೌಂಡರಿ 12 ಸಿಕ್ಸರ್ ಸಿಡಿಸಿ ಒಟ್ಟು 203 ರನ್ ಕಲೆ ಹಾಕಿದ್ರು. 17 ವರ್ಷದ ಜೈಸ್ವಾಲ್ ಬಡ ಕುಟುಂಬದವರಾಗಿದ್ದು ಪಾನಿ ಪುರಿ ಮಾರಿ ಬದುಕುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ