ಮಲ್ಲಪುರಂ(ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಎರಡು ದಿನಗಳ ಅನೌಪಚಾರಿಕ ಶೃಂಗಸಭೆಯಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುವುದರ ವಿರುದ್ಧ ಕೈಜೋಡಿಸಲು ಸಮ್ಮತಿಸಿzರೆ. ಆದರೆ ಸಭೆಯಲ್ಲಿ ಕಾಶ್ಮೀರದ ಬಗ್ಗೆ ಯಾವುದೇ ಚರ್ಚೆ ನಡೆಸಲಾಗಿಲ್ಲ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಉತ್ತರಿಸಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಕಾಶ್ಮೀರದ ಬಗ್ಗೆ ಕ್ಸಿ ಜಿನ್‌ಪಿಂಗ್ ಉಖಿಸಲಿಲ್ಲವಾದರೂ, ಇತ್ತೀಚೆಗೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶಕ್ಕೆ ಭೇಟಿ ನೀಡಿದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದರು ಎಂದು ಮಾಹಿತಿ ನೀಡಿದರು.
ಅಲ್ಲದೆ. ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದ್ದು, ಈ ಕುರಿತು ನಮ್ಮ ನಿಲುವು ಸ್ಪಷ್ಟವಾಗಿದೆ ಎನ್ನುವುದೂ ಎಲ್ಲರಿಗೂ ತಿಳಿದ ಸಂಗತಿ ಎಂದು ಗೋಖಲೆ ವಿವರಿಸಿದರು.
ಭಯೋತ್ಪಾದನೆ ನಿಗ್ರಹದ ಬಗ್ಗೆ ಚರ್ಚೆ
ನಿರ್ದಿಷ್ಟವಾಗಿ ಕಾಶ್ಮೀರದ ವಿಷಯದ ಬಗ್ಗೆ ಪ್ರಸ್ತಾಪಿಸಿಲ್ಲ ಮತ್ತು ಚರ್ಚಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯ್ ಗೋಖಲೆ, ಭಯೋತ್ಪಾದನೆ ನಿಗ್ರಹದಂತಹ ವಿಷಯಗಳಿಗೆ ಸಂಬಂಸಿದಂತೆ ಅನೌಪಚಾರಿಕ ಶೃಂಗಸಭೆ ವ್ಯಾಪಕವಾದ ಚರ್ಚೆಗಳನ್ನು ನಡೆಸಿತು. ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ಭೀತಿಯ ಬೆದರಿಕೆಯನ್ನು ನಿಗ್ರಹಿಸುವ ಕುರಿತು ಚರ್ಚಿಸಲಾಗಿದೆ ಎಂದು ಅವರು ವಿವರಿಸಿದರು.
ಕ್ಸಿ ಜಿನ್ ಪಿಂಗ್ ಅವರು ಇಮ್ರಾನ್ ಖಾನ್ ಭೇಟಿಯ ಬಗ್ಗೆ ವಿವರಿಸಿದಾಗ ಪ್ರಧಾನಿ ಮೋದಿ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ, ಚೀನಾ ಅಧ್ಯಕ್ಷರ ಮಾತನ್ನು ಮೋದಿ ಆಲಿಸಿದರು ಎಂದಷ್ಟೇ ವಿಜಯ್ ಗೋಖಲೆ ಉತ್ತರಿಸಿದರು .
ಆದಾಗ್ಯೂ, ವಿದೇಶಾಂಗ ಕಾರ್ಯದರ್ಶಿ ಕಾಶ್ಮೀರಕ್ಕೆ ಸಂಬಂಸಿದಂತೆ ಯಾವುದೇ ಸಂದರ್ಭದಲ್ಲಿ, ಭಾರತ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಇದು ದೇಶದ ಆಂತರಿಕ ವಿಷಯಗಳಿಗೆ ಮಾತ್ರ ಸಂಬಂಸಿದ ವಿಷಯವಾಗಿದೆ ಎಂದು ಹೇಳಿದರು.
ವ್ಯಾಪಾರದ ವಿಷಯಗಳಲ್ಲಿ ಸಮತೋಲನವನ್ನು ತರಲು ಯಾಂತ್ರಿಕತೆಯು ಪ್ರಯತ್ನಿಸುತ್ತದೆ.ಆದ್ದರಿಂದ, ಇದು ತುಂಬಾ ಸಕಾರಾತ್ಮಕ ಬೆಳವಣಿಗೆ ಎಂದು ನಾನು ಭಾವಿಸುತ್ತೇನೆ ಎಂದರು.
ವ್ಯಾಪಾರದ ಬಗ್ಗೆ ಉತ್ತಮ ಚರ್ಚೆ ನಡೆದಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಚೀನಾ ಪ್ರಾಮಾಣಿಕ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಭರವಸೆ ನೀಡಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ತಿಳಿಸಿದರು.