ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಯಾವುದು ಗೊತ್ತಾ ? ಏನಿದರ ವಿಶೇಷತೆ ?

ಮಹಾಬಲಿಪುರಂ : ಭಾರತ ಮತ್ತು ಚೀನಾ ಮಹಾ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಅವರ ಸ್ನೇಹ ಸಮ್ಮಿಲನಕ್ಕೆ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಗಿದೆ. ಈ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ  ಚಿನ್ನ ಲೇಪಿತ  ಅಣ್ಣಂ ದೀಪ ಮತ್ತು ತಾಂಜಾವೂರ್ ಶೈಲಿಯಲ್ಲಿರುವ ನೃತ್ಯ ಸರಸ್ವತಿಯ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಣ್ಣಂ ದೀಪ 6 ಅಡಿ ಎತ್ತರವಿದ್ದು ಇದನ್ನು ನಾಚಿಯಾರ್​ ಕೊಯಿಲ್ ಸಮುದಾಯದ ಎಂಟು ಜನರ ತಂಡ ಕಂಚಿನಿಂದ ತಯಾರಿಸಿದೆ. ಇದನ್ನು ಸಿದ್ದಪಡಿಸಲು 12 ದಿನಗಳು ಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಇದು 108 ಕೆ.ಜಿ. ತೂಕವಿದೆ. ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮವು ಈ ದೀಪ ಮತ್ತು ಕಲಾಕೃತಿಯನ್ನು ಜಿನ್​ಪಿಂಗ್​ಗೆ ಉಡುಗೊರೆಯಾಗಿ ತಂದಿತ್ತು.

ನೃತ್ಯ ಸರಸ್ವತಿದೇವಿ ಕಲಾಕೃತಿಯನ್ನು ಕಲಾವಿದ ಬಿ.ಲೋಕನಾಥ್ ಬಿಡಿಸಿದ್ದಾರೆ. ಇದು 3 ಅಡಿ ಎತ್ತರ ಮತ್ತು 4 ಅಡಿ ಅಗಲವನ್ನು ಹೊಂದಿದ್ದು 40 ಕೆ.ಜಿ. ತೂಕವಿದೆ. ಈ ಕಲಾಕೃತಿ 45 ದಿನದಲ್ಲಿ ತಯಾರಾಗಿದೆ. ನೃತ್ಯ ಮಾಡುವ ಸರಸ್ವತಿಯನ್ನು ಜ್ಞಾನ, ಸಂಗೀತ, ಕಲೆ, ಪ್ರಕೃತಿ ಮತ್ತು ಬುದ್ಧಿವಂತಿಕೆಯ ಸಾಕಾರವೆಂದು ಪರಿಗಣಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ